ಕುವೆಂಪು ಬರವಣಿಗೆಯಲ್ಲಿ ಸಾಮಾಜಿಕ ಚಿಂತನೆ ಮೌಢ್ಯ ನಿರಾಕರಣೆ  

ಹಿರಿಯೂರು : ಡಿ.31-  ಕುವೆಂಪುರವರ ಬರವಣಿಗೆಯಲ್ಲಿ ಸಾಮಾಜಿಕ ಚಿಂತನೆ ಹಾಗೂ ಮೌಢ್ಯ ನಿರಾಕರಣೆ ಇದೆ ಅವರು ಅತ್ಯುತ್ತಮ ಪುಸ್ತಕಗಳನ್ನು ಬರೆದು ಕನ್ನಡದ ಅಗ್ರಮಾನ್ಯ ಲೇಖಕರಾಗಿ ಹೊರಹೊಮ್ಮಿ ಮೂರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಡೆದವರು ಎಂದು ಶಿಕ್ಷಣ ತಜ್ಞರಾದ ಹೆಚ್ಎನ್ ನರಸಿಂಹಯ್ಯ ಹೇಳಿದರು ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೆ ಆರ್ ಪುರ ಸರ್ಕಾರಿ ಶಾಲೆಯ ಸಹಯೋಗದಲ್ಲಿ ನಡೆದ ಕುವೆಂಪುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ಪುಟ್ಟ ಗ್ರಾಮದಲ್ಲಿ ಜನಿಸಿ ವಿಶ್ವದಾದ್ಯಂತ ತನ್ನ ಹೆಸರನ್ನು ಪಸರಿಸಿದವರು ಈ ರೀತಿಯಾಗಿ ಮುಂದೆ ನೀವು ಸಹ ಅವರಂತೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಿ ಆರ್ ಪಿ ಹೆಚ್. ಆರ್  ಮಂಜುನಾಥ್  ಮಾತನಾಡಿ ಕುವೆಂಪುರವರು ಅಧ್ಯಾಪಕರಾಗಿದ್ದಾಗ ಮೊದಲು ಇಂಗ್ಲಿಷ್ ನಲ್ಲಿ ಬರೆಯುತ್ತಿದ್ದರು ನಂತರ ಸ್ನೇಹಿತರ ಸಲಹೆ ಮೇರೆಗೆ ನಮ್ಮ ಮಾತೃಭಾಷೆಯಲ್ಲಿ ಲೇಖನಗಳನ್ನು ಬರೆದರೆ ಮುಂದೆ ಅತ್ಯುತ್ತಮ ಬರಹಗಾರರಾಗಿ ಹೊರಹೊಮ್ಮುತ್ತೀರಾ ಎಂದು ಹೇಳಿದಾಗ ಕನ್ನಡದಲ್ಲಿ ಬರವಣಿಗೆ ಆರಂಭಿಸಿ ಮುಂದೆ ರಾಷ್ಟ್ರಕವಿಯಾದರುಭಾರತೀಯ ಜ್ಞಾನಪೀಠ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಂಪ ಪ್ರಶಸ್ತಿ ಕರ್ನಾಟಕ ರತ್ನ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದು ಮೇರು ಲೇಖಕರಾದರು ಎಂದು ಹೇಳಿದರು.ಕ ಸಾ ಪ  ಅಧ್ಯಕ್ಷರಾದ ವಿ.ಎಂ. ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಜೀವ ಮೂರ್ತಿ,ಬಿ.ಜಿ ಶ್ರೀನಿವಾಸ್, ಬಿ ಜಿ ಪದ್ಮನಾಭ್, ಜಿ ಆರ್ ನಂದವರಿಕ್ ನಾಗರಾಜ ನಾಯಕ, ಮಹಾದೇವ್ ಮಹೇಶ್, ವಿಜಯ್, ಶಿವಮೂರ್ತಿ, ಅಶ್ವಕ್ ಅಹಮದ್ ಶರೀಫ್ ಗೌರವ ಕಾರ್ಯದರ್ಶಿ ಹೆಚ್.ಕೃಷ್ಣಮೂರ್ತಿ,ಸಿ.ಜಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.