ಕುವೆಂಪು ಪ್ರತಿಷ್ಠಾನ ಸಮಿತಿಯ ಪದಗ್ರಹಣ

ಮಾನ್ವಿ ಜು ೨೪ :- ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ ೭೨ ಜನ್ಮದಿನದ ಅಂಗವಾಗಿ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನದ ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಿದರು..
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ ಉದ್ಘಾಟನೆ ಮಾಡಿದರು, ಶಾಸಕ ಜಿ ಹಂಪಯ್ಯ ನಾಯಕ ಇವರ ಸುಪುತ್ರ ವಕೀಲ ಶಿವರಾಜ ನಾಯಕ ಮಾತಾನಾಡಿ ಯರದೊಡ್ಡಿಯವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರಿಗೆ ಸನ್ಮಾನಿಸಿದರು.ನಂತರ ಅನೇಕ ಗಣ್ಯರು ಮಾತಾನಾಡಿ ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಈ ಕುವೆಂಪು ಪ್ರತಿಷ್ಠಾನ ಅನೇಕ ಚಟುವಟಿಕೆಗಳನ್ನು ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ, ಕಸಪಾ ಜಿಲ್ಲಾ ಕಾರ್ಯದರ್ಶಿ ತಾಯಪ್ಪ ಬಿ ಹೊಸೂರು, ಹಿರಿಯ ಸಾಹಿತಿ ಮಧುಪಾಂಡೆ,ವೀರನಗೌಡ ಪೋತ್ನಾಳ, ಅಕ್ಬರ್ ಸಾಬ್ ,ಸೈಯಾದ್ ತಾಜುದ್ದೀನ್, ಮನೋಹರ ವಿಶ್ವಕರ್ಮ, ಡಾ ಬಸವರಾಜ ಸುಂಕೇಶ್ವರ,ಪ್ರಕಾಶ ಬಾಬು ಸೇರಿದಂತೆ ನೂರಾರು ಜನರಿದ್ದರು.