
ಬೆಂಗಳೂರು,ಮೇ.೧೮- ಕುವೆಂಪುನಗರ ವಾರ್ಡ್ ವ್ಯಾಪ್ತಿಯ ಸಿಂಗಾಪುರದಲ್ಲಿ ೭ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿದೆ.
ಶಾಸಕ ಕೃಷ್ಣಬೈರೇಗೌಡ ಇಂದು ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪರೀವೀಕ್ಷಣೆ ನಡೆಸಿದರು.
ಈ ವೇಳೆ ಕಟ್ಟಡ ಕಾಮಗಾರಿಯ ರೂಪುರೇಷೆ ವೀಕ್ಷಿಸಿ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಿದರು. ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುಧಾಕರ್ ಸಂಪೂರ್ಣ ಮಾಹಿತಿ ಒದಗಿಸಿದರು.
ಆಯುಕ್ತರಾದ ರಣದೀಪ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರೊಂದಿಗೆ ಚರ್ಚಿಸಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಈ ಹಿಂದೆ ೩ಕೋಟಿ ರೂ. ಅನುದಾನದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ೪ಕೋಟಿ ರೂ ಶಾಸಕರ ಅನುದಾನದಲ್ಲಿ ೩೦ಸಾವಿರ ಚದರಡಿ ಜಾಗದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಆಸ್ಪತ್ರೆ ನಿರ್ಮಾಸಲಾಗುತ್ತಿದೆ.
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಶಾಸಕ ಕೃಷ್ಣಬೈರೇಗೌಡರ ಮಾರ್ಗದರ್ಶನದಲ್ಲಿ ಒತ್ತುವರಿ ತೆರವುಗೊಳಿಸಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹಲವಾರು ಬಡಜನತೆಗೆ ಅನುಕೂಲವಾಗಲಿದೆ ಎಂದು ಕುವೆಂಪುನಗರ ವಾರ್ಡ್ ಪಾಲಿಕೆ ಮಾಜಿ ಸದಸ್ಯ ಪಾರ್ಥಿಬ ರಾಜನ್ ತಿಳಿಸಿದರು.
ಈ ವೇಳೆ ಕುವೆಂಪುನಗರ ವಾರ್ಡ್ ಅಧ್ಯಕ್ಷ ಮಹಾಂತೇಶ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಎಸ್.ಎ.ಮುನೇಗೌಡ, ವೆಂಕಟ್, ಮೂಸಾ, ನವಾಜ್, ಅಲ್ಲಾಬಕಾಶ್, ಮುನಿಯಾ,ರಾಜಣ್ಣ, ಭಾಗ್ಯ, ಅಶ್ವಿನಿ,ಆಶಾ, ಮಣಿ, ಜೇಮ್ಸ್, ಥಿಯೇಟರ್ ಚಂದ್ರು, ಪಾಪಣ್ಣ,ನಾಗಿಲ, ಶರವಣ, ಸಂತೋಷ್ ರಾಜನ್, ರಾಮು, ಭಾಗ್ಯರಾಜ್, ವಿನೋದ್, ಮೋಹನ್ ಸೇರಿ ಇನ್ನಿತರರಿದ್ದರು.