ಕುವೆಂಪು ಜನ್ಮದಿನ: ವಿಶ್ವ ಮಾನವ ದಿನ ಆಚರಣೆ

ಮುದಗಲ್.ಡಿ.೨೯- ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರ ೧೧೯ ನೇ ಜನ್ಮ ದಿನಾಚರಣೆಯನ್ನು ಮುದಗಲ್ಲ ಪುರಸಭೆ ವತಿಯಿಂದ ಆಚರಣೆ ಮಾಡಲಾಯಿತು. ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ಅವರು ನಂತರ ಮುಖ್ಯಾಧಿಕಾರಿ ಹಾಗೂ ಗಣ್ಯರು ಪುಷ್ಪಾ ನಮನ ಸಲ್ಲಿಸಿದರು.
ನಂತರದ ಮಾತನಾಡಿದ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ ಅವರು ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಕುವೆಂಪು ರಚಿಸಿದ ಕಾವ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ, ಕಾಂಗ್ರೆಸ್ ಪಕ್ಷದ ಮುಖಂಡರಾದ ಹುಸೇನ್ ಅಲಿಮಕಾಂದಾರ, ಮೈಬುಸಾಬ ಬಾರಿಗಿಡ, ಹಾಗೂಬಸವರಾಜ ಬಂಕದಮನಿ ಸಿಬ್ಬಂದಿಗಳಾದ ಚನ್ನಮ್ಮ ದಳವಾಯಿ ಹಿರೇಮಠ, ನಿಸಾರ್ ಅಹಮದ್, ಜಿಲಾನಿ ಪಾಶ, ಪವನ್ ಕುಮಾರ್ ಇತರರು ಉಪಸ್ಥಿತರಿದ್ದರು.