ಕುವೆಂಪು ಕಾದಂಬರಿಗಳಲ್ಲಿ ಸೌಂದರ್ಯದ ಅನುಭೂತಿ ಇದೆ

ಧಾರವಾಡ,ಜೂ.20: ಕುವೆಂಪು ಅವರ ಕಾದಂಬರಿಗಳಲ್ಲಿ ನಿಸರ್ಗದ ನೆಲೆ ಹಾಗೂ ಹಿನ್ನೆಲೆಯನ್ನು ಮನಮೋಹಕವಾಗಿ ಚಿತ್ರಿಸಲಾಗಿದ್ದುಅಲ್ಲಿ ಸೌಂದರ್ಯದಅನುಭೂತಿಇದೆಎಂದು ನಿಗದಿ ಸರಕಾರಿ ಪ.ಪೂ. ಮಹಾವಿದ್ಯಾಲಯದಉಪನ್ಯಾಸಕಡಾ.ಶ್ರೀಧರ ಹೆಗಡೆ ಭದ್ರನ್ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ರಶ್ಮಿ ಮಂಜುನಾಥ ನಾಯಕ ಸ್ಮರಣೆಯದತ್ತಿಕಾರ್ಯಕ್ರಮದಲ್ಲಿ `ಕುವೆಂಪು ಕಾದಂಬರಿಯಲ್ಲಿ ನಿಸರ್ಗ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಹಜವಾಗಿತಮ್ಮಎರಡು ಕಾದಂಬರಿಗಳಲ್ಲಿ ನಿಸರ್ಗದರಮಣೀಯತೆಯನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ.ನಿಸರ್ಗವೇ ಪ್ರಧಾನಅಂಶವಾದ ಈ ಕಾದಂಬರಿಗಳಲ್ಲಿ ಸೂರ್ಯೋದಯ, ಮಳೆಗಾಲದ ದೃಶ್ಯ, ಮಂಜಿನ ರಾಶಿ, ಕಾಡು ಪ್ರಾಣಿಗಳು, ನದಿ, ಅರಣ್ಯಗಳ ಸನ್ನಿವೇಶಗಳನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ.ಕಾಡಿನ ಮಧ್ಯದಜನರ ಸಂಕೀರ್ಣ ಬದುಕು.ಅವರು ಪರಿಸರದೊಂದಿಗೆ ಸಾಮರಸ್ಯದಿಂದ, ಹೊಂದಾಣಿಕೆಯಿಂದ ಬದುಕುವರೀತಿಯಚಿತ್ರಣವನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ.ಅವರ ಕಾದಂಬರಿಗಳಲ್ಲಿ ನಿಸರ್ಗಒಂದುತತ್ವವಾಗಿ ಪ್ರವಹಿಸಿದೆ.ಕೆಲವು ಸ್ಥಳಗಳ ವಿಹಂಗಮ ನೋಟಗಳು ಅವರ ಕಾದಂಬರಿಗಳಲ್ಲಿವೆ ಎಂದರು.
ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಮನೋಹರ ಜಿ. ನಾಯಕ ಅತಿಥಿಗಳಾಗಿ ಮಾತನಾಡಿ, ಕೆ.ಎಚ್.ನಾಯಕಅವರುದತ್ತಿ ಮೂಲಕ ತಮ್ಮ ಮಗಳನ್ನ ಸ್ಮರಿಸುತ್ತಿರುವ ಭಾವನಾತ್ಮಕಕಾರ್ಯಕ್ರಮವಾಗಿದೆ. ಕ.ವಿ.ವ. ಸಂಘವು ಕರ್ನಾಟಕದ ಪರಿಕಲ್ಪನೆ ಹುಟ್ಟು ಹಾಕಿದ ಸಂಸ್ಥೆ.ಧಾರವಾಡದ ಮಣ್ಣಿನಲ್ಲಿಅಂತಹ ಶಕ್ತಿ ಇದೆ. ಈ ನಾಡಿನ ಸಾಂಸ್ಕøತಿಕ ಹಿರಿಮೆಗೆ ಕ.ವಿ.ವ ಸಂಘ ಶಕ್ತಿ ತುಂಬಿದೆಎಂದು ಹೇಳಿದರು.
ಇನ್ನೋರ್ವಅತಿಥಿಧಾರವಾಡ ಶಹರಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ, ಕಲಿಕೆಯಲ್ಲಿ ಹಿಂದುಳಿದ ಎಸ್.ಎಸ್.ಎಲ್.ಸಿ ಮಕ್ಕಳಲ್ಲಿ ಗುಣಾತ್ಮಕ ಬದಲಾವಣೆತಂದು ಶಿಕ್ಷಣದ ಬಲವರ್ಧನೆಗೆ ಯೋಜಿಸಿದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.
ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ದತ್ತಿ ದಾನಿಗಳಾದ ಕೆ.ಎಚ್. ನಾಯಕದತ್ತಿಆಶಯಕುರಿತು ಮಾತನಾಡಿದರು.
ವೇದಿಕೆಯಲ್ಲಿ ಶಂಕರ ಕುಂಬಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಹರ ವಲಯದ ಬಿ.ಆರ್.ಸಿ.ಸಂಯೋಜಕರಾದಜಾವೂರಇದ್ದರು.
ಕ.ವಿ.ವ. ಸಂಘ ಹಾಗೂ ಧಾರವಾಡಕ್ಷೇತ್ರ ಶಿಕ್ಷಣಾಧಿಕಾರಿಗಳ ಶಹರ ವಲಯದಕಚೇರಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕು.ರೋಹನಚಿವಟೆ, ಕೆ.ಇ.ಬೋರ್ಡ್‍ಕನ್ನಡ ಮಾಧ್ಯಮ ಪ್ರೌಢಶಾಲೆ, ಧಾರವಾಡ, ಕು. ಸಂಜನಾಅಂಗಡಿ, ಮಲ್ಲಸಜ್ಜನಆಂಗ್ಲ ಮಾಧ್ಯಮ ಪ್ರೌಢಶಾಲೆ, ಧಾರವಾಡ, ಕು.ಆಯುಷ್ ಜೋಗಳೆಕರ, ಕೆ.ಇ.ಬೋರ್ಡ್‍ಇಂಗ್ಲೀಷ ಮಾಧ್ಯಮ ಪ್ರೌಢಶಾಲೆ, ಧಾರವಾಡ, ಕು.ಸಾಚಿ ಹೊಂಗಲಮಠ, ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರಇಂಗ್ಲೀಷ ಮಾಧ್ಯಮ ಪ್ರೌಢಶಾಲೆ, ವಿದ್ಯಾಗಿರಿ, ಧಾರವಾಡ, ಕು. ವಿನೋದಾ ವಿ. ಹಳಕಟ್ಟಿ, ಬಿ.ಜಿ.ಎಸ್. ಪ್ರೌಢಶಾಲೆ, ಧಾರವಾಡ, ಕು. ಅಮನ್‍ಅಹ್ಮದಖಾನ್, ಪವನ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಧಾರವಾಡ ಸನ್ಮಾನಿಸಿ, ಗೌರವಿಸಲಾಯಿತು. ಕೆ.ಎಚ್.ನಾಯಕಧಾರವಾಡ ಶಹರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ಸ್ ವಿತರಿಸಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಎಂ.ಎಂ.ಚಿಕ್ಕಮಠ, ಡಾ.ಬಾಳಣ್ಣಾ ಶೀಗಿಹಳ್ಳಿ, ನಿಂಗಣ್ಣಕುಂಟಿ, ಡಾ.ಬಾಳಪ್ಪಾ ಚಿನಗುಡಿ, ಶ್ರೀಮತಿ ಬೇಬಿ ನಾಯಕ, ಸವಿತಾ ಮನೋಹರ ನಾಯಕ, ಪದ್ಮಾವತಿ ಶೀಗಿಹಳ್ಳಿ, ಅಶೋಕ ಬಿ. ನಾಯಕ, ಡಾ. ವಿಲಾಸ ಕುಲಕರ್ಣಿ, ಡಾ. ವಿಶ್ವನಾಥಕೊರವಿ, ಆರ್.ಜಿ.ತಿಮ್ಮಾಪೂರ, ಬಿ.ಬಿ. ನಾಯಕ, ಮಹಾಂತೇಶ ನರೇಗಲ್, ಡಾ.ಮಿಹಿರ್ ನಾಯಕ ಸೇರಿದಂತೆಅನೇಕರು ಉಪಸ್ಥಿತರಿದ್ದರು.