ಕುವೆಂಪು ಕನ್ನಡ ಸಾಹಿತ್ಯ ಅನರ್ಘ್ಯ ರತ್ನ

ಬಳ್ಳಾರಿ, ಡಿ.29: ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನವೆಂದು ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕಿ ಶ್ರೀಮತಿ ಲಕ್ಷ್ಮಿಕಿರಣ ಬಿ.ಕೆ. ಅಭಿಪ್ರಾಯಪಟ್ಟರು.
ಶ್ರೀಮಂಜುನಾಥ ಲಲಿತ ಕಲಾ ಬಳಗವು ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಆಡು ಮುಟ್ಟದ ಸೊಪ್ಪಿಲ್ಲ, ರಸಋಷಿ ಕುವೆಂಪು ಬರೆಯದ ವಿಷಯಗಳೇ ಇಲ್ಲ.ಎನ್ನುವಂತೆ, ಕುಪ್ಪಳ್ಳಿಯಂತಹ ಜನವಸತಿ ವಿರಳವಿರುವ ಹಳ್ಳಿಯಲ್ಲಿ ಬಾಲ್ಯವನ್ನು ಕಳೆದ ಕುವೆಂಪು ಶ್ರೀ ರಾಮಾಯಣದರ್ಶನಂ ನಂತಹ ಮೇರುಕಾವ್ಯವನ್ನುರಚಿಸಬೇಕಾದರೆಅವರಕಾವ್ಯತಾದ್ಯಾತ್ಮಕತೆಯನ್ನುನಾವುಗಳು ಅರಿಯಬೇಕಾಗಿದೆ. ಬೃಹತ್ ಕಾದಂಬರಿಗಳ ಜೊತೆಗೆ ಅನೇಕ ಕವನ ಸಂಕಲನಗಳು, ನಾಟಕಗಳನ್ನು ರಚಿಸಿದ ಕುವೆಂಪು ಕನ್ನಡ ಸಾಹಿತ್ಯದಅಂತಸತ್ವದದ್ಯೋತಕವಾಗಿದ್ಧಾರೆಂದು ಶ್ರೀಮತಿ ಲಕ್ಷ್ಮಿಕಿರಣಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ ರಂಗಣ್ಣನವರ ಮಾತನಾಡಿ, ಕುವೆಂಪು ಸಾಹಿತ್ಯವನ್ನುಓದುವುದೆಂದರೆ ಮಲೆನಾಡಿನ ಸಿರಿಬನಗಳಲ್ಲಿ ಸಂಚರಿಸಿದ ಅನುಭವವಾಗುತ್ತದೆ.‘ನಡೆಮುಂದೆ ನಡೆದಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆಯೆಕುಗ್ಗದೆಯೆ ನುಗ್ಗಿ ನಡೆ ಮುಂದೆ, ಎನ್ನುವ ಕವನ ಸ್ವಾಂತತ್ರ್ಯ ಹೋರಾಟಗಾರರಿಗೆ ಪ್ರೇರಣೆಯನ್ನ ಒದಗಿಸಿತು.ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ಭಾರತವಾಗವಾವದುಎನ್ನುವ ಕವನವು ಕುರುಕ್ಷೇತ್ರ ಯುದ್ಧವನ್ನು ಕಣ್ಮುಂದೆ ಕಟ್ಟುವಂತೆ ಕವನ ರಚಿಸುವುದರ ಜೊತೆಗೆ, ಮಕ್ಕಳಿಗಾಗಿ ಅನೇಕ ಕೃತಿಗಳನ್ನು ಬರೆದಿದ್ದಾರೆ.ಜಾತಿಯತೆ ಮತ್ತು ಮತ ಮೌಢ್ಯವನ್ನು ತೊಲಗಿಸುವಲ್ಲಿ ಕುವೆಂಪು ಸಾಹಿತ್ಯ ಮಹತ್ವದ ಪಾತ್ರವಹಿಸುತ್ತದೆಎಂದರು.
ವೇದಿಕೆಯಲ್ಲಿರಂಗಕಲಾವಿದ ಪುರುಷೋತ್ತಮ ಹಂದ್ಯಾಳ್, ಜನಪದಕಲಾವಿದಯಲ್ಲನಗೌಡ ಶಂಕರಬಂಡೆ ಮತ್ತು ಕ.ಸಾ.ಪ ಮಾಜಿಅಧ್ಯಕ್ಷ ನಿಷ್ಠಿ ರುದ್ರಪ್ಪಉಪಸ್ಥಿತರಿದ್ದರು. ಹನುಮಯ್ಯ ಮತ್ತುತಂಡದವರಿಂದ ಕುವೆಂಪು ಗೀತಗಾಯನ, ನೃತ್ಯ ಗುರುಗಳಾದ ಜಿಲಾನಾ ಬಾಷಾ ತಂಡದವರಿಂದ ಕುವೆಂಪು ಗೀತೆಗಳಿಗೆ ನೃತ್ಯ ಸಂಯೋಜನೆಯನ್ನು ಮಾಡಿ ನೃತ್ಯ ಪ್ರದರ್ಶವನ್ನುಆಯೋಜಿಸಲಾಗಿತ್ತು..
ಅಮಾತಿ ಬಸವರಾಜಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.ಮಂಜನಾಥ ಲಲಿತ ಕಲಾ ಬಳಗದ ಮಂಜುನಾಥ ಗೋವಿಂದವಾಡ ಪ್ರಾಸ್ವಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.