ಕುವೆಂಪು ಕನ್ನಡಿಗರಿಗೆ ಆದರ್ಶ

ಔರಾದ :ಡಿ.30: ಕುವೆಂಪು ಕನ್ನಡಿಗರ ಆದರ್ಶ ದೇಶದಲ್ಲೇ ಕನ್ನಡಕ್ಕೆ ಅತಿಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಲಭಿಸಿರುವದರಲ್ಲಿ ಸಾಹಿತಿಗಳ ಕೊಡುಗೆ ಅಪಾರವಾದದ್ದು ಅದರಲ್ಲಿ ಮೆರುಸ್ಥಾನ ಕುವೆಂಪು ಅವರಿಗೆ ಸಲ್ಲುತ್ತದೆ. ಕುವೆಂಪು ಅವರು ಮಾನವ ಸಂದೇಶವನ್ನು ನೀಡುವ ಮೂಲಕ ವಿಶ್ವಮಾನವರಾದವರು. ಅದಕ್ಕಾಗಿಯೆ ಅವರ ಜನ್ಮ ದಿನವನ್ನು ವಿಶ್ವಮಾನವ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಔರಾದ ತಾಲೂಕಿನ ಸಂತಪೂರನ ಶ್ರೀ ಸಿದ್ಥರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪುನಶ್ಚೇತನ ಕಾರ್ಯಕ್ರಮ ಹಾಗೂ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನುದ್ದೆಶಿಸಿ ಉಪನ್ಯಾಸ ಮಂಡಿಸಿದ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಶಿಕ್ಷಕರಾದ ಡಾ. ಶಾಲಿವಾನ ಉದಗಿರೆ ಅವರು ಕುವೆಂಪು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವದರಲ್ಲಿ ಮೊದಲಿಗರು ಎಂದು ಹೇಳಿದರು. ಶಿಕ್ಷಣದ ಜೊತೆಗೆ ಸಂಸ್ಕೃತಿಯಿಂದ ವಿದ್ಯಾರ್ಥಿಗಳ ಜೀವನ ಕೂಡಿರಬೇಕು, ಮಾತೃಭಾಷೆಯ ಬಗ್ಗೆ ಅಭಿಮಾನ ತಾಯಿ ಭಾಷೆ ತಾಯಿಗೆ ಖುಣಿಯಾಗಿರಬೇಕು. ಸಮಸ್ಯೆಗೆ ಮೆಟ್ಟಿ ನಿಂತವನು ಇತಿಹಾಸ ಸೃಷ್ಟಿಸುತ್ತಾನೆ, ವಿದ್ಯಾರ್ಥಿಗಳು ಸೋತೆ ಎಂದು ನಿರಾಸೆಯಾಗದೆ ಕುಗ್ಗದೆ ಪರ್ಯಾಯ ದಾರಿ ಹುಡುಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುವುದು. ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಬಿಟ್ಟರೆ ಸಾಲದು ಅವರು ನೀಡಿರುವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀಲಕುಮಾರ ಉತ್ಕಾರ ಅವರು ಮಾತನಾಡಿ ಆಧುನಿಕ ಕನ್ನಡದ ಶ್ರೇಷ್ಠ ಕವಿ ಕುವೆಂಪು. ಏನಾದರು ಆಗು ಮೊದಲು ಮಾನವನಾಗು ವಿಶ್ವಮಾನವ ಸಂದೇಶ ಸಾರಿದವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಜೆವಾಣಿ ಪತ್ರಿಕೆಯ ವರದಿಗಾರ ಅಮರಸ್ವಾಮಿ ಸ್ಥಾವರಮಠ, ಶಿವಕುಮಾರ ಫುಲೆ, ಕಲ್ಲಪ್ಪ ಬುಟ್ಟೆ ಹಾಗೂ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.