ಕುಳಾಯಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ, ೧೬% ಡಿವಿಡೆಂಡ್ ಘೋಷಣೆ

ಮಂಗಳೂರು, ಜ.೮-ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ.ಚಕ್ರಸೌಧ,ಕುಳಾಯಿ ಇದರ ೨೦೧೯-೨೦ನೆಯ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕೇಂದ್ರ ಕಚೇರಿ ಕುಳಾಯಿಯಲ್ಲಿ ದಿನಾಂಕ ೨೫-೧೨-೨೦೨೦ರಂದು ಶುಕ್ರವಾರ ಸಂಘದ ಅಧ್ಯಕ್ಷರಾದ ಶ್ರೀ ಮಯೂರ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮಂಗಳೂರು ತಾಲೂಕಿನಲ್ಲಿ ಸಂಘವು ಐದು ಶಾಖೆಗಳನ್ನು ಹೊಂದಿದ್ದು ೨೦೧೯-೨೦ನೆಯ ಸಾಲಿನಲ್ಲಿ ಒಟ್ಟು ರೂ ೬೯ ಕೋಟಿ ೨೨ಲಕ್ಷ ವ್ಯವಹಾರ ನಡೆಸಿ ದಿನಾಂಕ ೩೧-೦೩-೨೦೨೦ರ ವರ್ಷಾಂತ್ಯಕ್ಕೆ ರೂಪಾಯಿ ೧೪.೦೮ ಕೋಟಿ ದುಡಿಯುವ ಬಂಡವಾಳ ಇದ್ದು, ರೂ. ೧೧.೭೬ ಕೋಟಿ ಠೇವಣಾತಿ ಇದ್ದು, ರೂ. ೭.೯೪ ಕೋಟಿ ಸಾಲ ಹೊರ ಬಾಕಿ ಇರುತ್ತದೆ, ಹಾಗೂ ರೂ. ೩೫,೮೬,೧೭೮.೫೩ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ ೧೬% ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಶ್ರೀ ಮಯೂರ್ ಉಳ್ಳಾಲ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ, ಗುಡಿ ಕೈಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಭನೆಗಾಗಿ ಸ್ವ-ಸಹಾಯ ಸಂಘದ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ, ಹಾಗೂ ಸಂಘದ ಎ ದರ್ಜೆ ಸದಸ್ಯರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡಲು ಉದ್ದೇಶಿಸಲಾಗಿದ್ದು, ಸದಸ್ಯರು ಸಂಘದಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ತಿಳಿಸಿದರು. ಕುಂಬಾರ ವೃತ್ತಿಯನ್ನು ಮಾಡುತ್ತಿರುವ ಮೂಡು ಪೆರಾರ ಗ್ರಾಮದ ವಾಸು ಕುಲಾಲ್ ಇವರಿಗೆ ಆರ್ಥಿಕ ಸಹಾಯಧನ ನೀಡಲಾಯಿತು . ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿನಯ ಕುಮಾರ್ ಇವರು ೨೦೧೯-೨೦ನೆಯ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿ, ೨೦೨೦-೨೧ನೇ ಸಾಲಿನ ಆಯ ವ್ಯಯ ಪಟ್ಟಿ, ಮತ್ತು ೨೦೧೯-೨೦ನೇ ಸಾಲಿನಲ್ಲಿ ಆಯ ವ್ಯಯ ಪಟ್ಟಿಗಿಂತ ಹೆಚ್ಚಾದ ಖರ್ಚುಗಳ ಮಂಜೂರಾತಿ ಹಾಗೂ ೨೦೧೯-೨೦ನೇ ಸಾಲಿನ ಕಾರ್ಯಯೋಜನೆ ಇತ್ಯಾದಿಗಳನ್ನು ಸಭೆಯಲ್ಲಿ ಮಂಡಿಸಿದರು ಹಾಗೂ ಮಹಾಸಭೆಯ ಅನುಮೋದನೆ ಪಡೆದುಕೊಳ್ಳಲಾಯಿತು.
ಸಂಘದ ಉಪಾಧ್ಯಕ್ಷರಾದ ಶ್ರೀ ರಾಮ ಬಂಗೇರ ಕಟೀಲು, ನಿರ್ದೇಶಕರಾದ ಶ್ರೀ ಸುಂದರ ಸಾಲ್ಯಾನ್ ತೋಕೂರು, ಶ್ರೀಮತಿ ಜಯಂತಿ ಕುಳಾಯಿ, ಶ್ರೀ ಕೆ.ನಾಗೇಶ್ ಬಜಾಲ್, ಶ್ರೀ ಸುರೇಶ್ ಎಸ್. ಕೆ. ಸೂರಿಂಜೆ, ಶ್ರೀ ಶೇಖರ ಕುತ್ತಾರು, ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರಾದ ಶ್ರೀ ಸುಧಾಕರ ಎನ್.ಸಾಲ್ಯಾನ್ ಇಡ್ಯಾ ,ಶ್ರೀ ಭಾಸ್ಕರ ಕುಲಾಲ್ ಬರ್ಕೆ, ಶ್ರೀ ಪದ್ಮನಾಭ ಬಂಗೇರ, ಮೈಂದಗುರಿ ಮತ್ತು ಶ್ರೀ ಗಣೇಶ್ ಎಸ್. ಕುಳಾಯಿ ಇವರು ಉಪಸ್ಥಿತರಿದ್ದು, ನಿರ್ದೇಶಕರಾದ ಶ್ರೀಸುಧಾಕರ ಎನ್.ಸಾಲ್ಯಾನ್ ಇವರು ವಂದಿಸಿದರು.