ಕುಲ ಕಸುಬುಗಳನ್ನು ಕೈಬಿಡಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

ನಂಜನಗೂಡು: ಜ.05:- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ಮಕ್ಕಳ ನಡೆ 625 ಅಂಕಗಳ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಶಾಸಕ ಹರ್ಷವರ್ಧನ್ ಉದ್ಘಾಟಿಸಿದರು.
ಈ ಕಾರ್ಯಕ್ರಮ ನಾಗಮ ಶಾಲೆಯ ಗುರುಭವನದಲ್ಲಿ ನಡೆಯಿತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹರ್ಷವರ್ಧನ್
ನಮ್ಮ ಸರ್ಕಾರ ಅವಧಿಯಲ್ಲಿ ಯಾವ ಸರ್ಕಾರಿ ಶಾಲೆಗಳು ಕೂಡ ಮುಚ್ಚಿಲ್ಲ ಹಿಂದಿನ ಸರ್ಕಾರದಲ್ಲಿ ಹಲವಾರು ಶಾಲೆಗಳು ಮುಚ್ಚಿ ಕೊಂಡಿದ್ದವು ನನ್ನ ಅವಧಿ 4:30 ವರ್ಷ ಮುಗಿದಿದೆ ನನ್ನ ಕ್ಷೇತ್ರದಲ್ಲಿ ಹೆಚ್ಚು ಶಿಕ್ಷಣಕ್ಕೆ ಪ್ರತಿನಿತ್ಯ ನೀಡಿದ್ದೇನೆ.
ನಮ್ಮ ಸರ್ಕಾರದಲ್ಲಿ ಶಿಕ್ಷಣ ಸಚಿವರಾದ ಮಾಜಿ ಸುರೇಶ್ ಕುಮಾರ್ ಹಾಗೂ ಹಾಲಿ ಸಚಿವರಾದ ನಾಗೇಶ್ ಅವರು ದೂರ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ಹಲವಾರು ಯೋಜನೆಗಳನ್ನು ತಂದಿದ್ದಾರೆ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣದಿಂದ ವಂಚಿತ ರಾಗಬಾರದು ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ನೀಡಲು ಸಹಕರಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಹಲವಾರು ನೂತನ ಶಾಲೆ ಕೊಠಡಿಗಳು ನಿರ್ಮಿಸಿದ್ದೇನೆ ಕಟ್ಟಕಡೆಯ ಹಳ್ಳಿಯ ಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ನೀಡುವಲ್ಲಿ ಸಹಕರಿಸಿದ್ದೇನೆ
ನೀವು ಕೂಡ ಕುಲ ಕಸಬುಗಳನ್ನು ಮುಂದುವರೆಸಿಕೊಂಡು ಹೋಗಬಾರದು ನೀವು ಕೂಡ ನಮ್ಮ ಸರ್ಕಾರದಲ್ಲಿ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ ಇದನ್ನು ಸದುಪಯೋಗಪಡಿಸಿಕೊಂಡು ನೀವು ಚೆನ್ನಾಗಿ ಓದಿ ನಿಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಿ ಡಾಕ್ಟರ್ ಇಂಜಿನಿಯರ್ ಹಾಗೂ ಐಎಎಸ್ ಐಪಿಎಸ್ ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಗೆ ಚೆನ್ನಾಗಿ ಓದಿ ಕೆಲಸವನ್ನು ಪಡೆದುಕೊಳ್ಳಿ ಎಂದು ಈ ಮಾತು ಹೇಳಿದರು ಕ್ಷೇತ್ರದ ಶಿಕ್ಷಣದ ಕಾರ್ಯ ರಾಜು ಉತ್ತಮ ಕೆಲಸ ಮಾಡುತ್ತಿದ್ದಾರೆ.
ಪ್ರತಿಯೊಂದು ಹಳ್ಳಿಗಳನ್ನು ಗುರುತಿಸಿ ಆ ಶಾಲೆಯ ಸಮಸ್ಯೆಗಳನ್ನು ಹೇಳಿ ಪರಿಹರಿಸಿಕೊಳ್ಳುತ್ತಿದ್ದಾರೆ ಇಂತಹ ಅಧಿಕಾರಿಗಳು ಕ್ಷೇತ್ರಕ್ಕೆ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡುತ್ತಾರೆ ಎಂದರು
ಶಿಕ್ಷಣಾಧಿಕಾರಿ ರಾಜು ಮಾತನಾಡಿ ಶಾಸಕರು ಪ್ರತಿಯೊಬ್ಬ ಕಟ ಕಡೆಯ ಗ್ರಾಮದ ಮಕ್ಕಳಿಗೂ ವಿದ್ಯಾಭ್ಯಾಸ ಸಿಗಬೇಕು ಯಾರು ವಂಚಿತರಾಗಬಾರದು ಎಂಬುದನ್ನು ಅರಿತು ಕ್ಷೇತ್ರದಲ್ಲಿರುವ ತಮ್ಮ ಅವಧಿಯಲ್ಲಿ ಶೀತಲಗೊಂಡ ಶಾಲೆಗಳನ್ನು ದುರಸ್ತಿ ಕೆಲಸ ಮಾಡಿ ಸುಮಾರು 124 ನೂತನ ಶಾಲೆ ಕೊಠಡಿಗಳನ್ನು ಕಟ್ಟಡಗಳನ್ನು ನಿರ್ಮಿಸಿದ್ದಾರೆ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ.
3000 ಶಿಕ್ಷಕರು 451 ಶಾಲೆಗಳು ಇವೆ ಕೆಲ ವಿದ್ಯಾರ್ಥಿಗಳು 625ಕ್ಕೆ 625 623 624 ಅಂಕಗಳನ್ನು ಪಡೆದಿದ್ದಾರೆ ಕೆಲವಿದ್ದಾರ್ಥಗಳು 75% 80% ಪಡೆದಿದ್ದಾರೆ ಆದರೆ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು 625ಕ್ಕೆ 624 ಅಂಕ ಗಳಿಸಲು ಈ ಕಾರ್ಯಕ್ರಮಮ್ಮ ಹಮ್ಮಿಕೊಂಡಿದ್ದೇವೆ.
ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹೆಚ್ಚು ಅಂಕ ತರಲು ಶ್ರಮ ಪಡುತ್ತೇವೆ ಈ ಬಾರಿ ಉತ್ತಮ ಫಲಿತಾಂಶ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಹರ್ಷವರ್ಧನ್ ಶಿಕ್ಷಣಾಧಿಕಾರಿ ರಾಜು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚಿಕ್ಕ ರಂಗನಾಯಕ ತಾಲೂಕು ಅಧ್ಯಕ್ಷ ಮಹೇಶ್ ಸೇರಿದಂತೆ ಇತರರು ಇದ್ದರು.