ಕುಲಪತಿ ಡಾ.ಕೆ.ಎಸ್.ಕಟ್ಟಿಮನಿ ವಿರುದ್ದ ರಾಜ್ಯಪಾಲರಿಗೆ ದೂರು – ಹನುಮಂತರೆಡ್ಡಿ

ರಾಯಚೂರು,ನ.೨೮- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಎಸ್.ಕಟ್ಟಿಮನಿ ಅವರು ಸಾಕಷ್ಟು ಅವ್ಯವಹಾರಗಳನ್ನು ನಡೆಸುತ್ತಿದ್ದಾರೆ ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹನುಮಂತ ರೆಡ್ಡಿ ಅಲ್ಲಪಾಡು ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆಯನ್ನು ಮಾಡುತ್ತಾ ಅಕಾಲಿಕ ನಿಧನ ಹೊಂದಿದಾಗ ಸರ್ಕಾರದ ನಿಯಾಮವಳಿಗಳ ಪ್ರಕಾರ ಅನುಕಂಪದ ಆಧಾರದ ಮೇಲೆ ಆ ಸಿಬ್ಬಂದಿಯ ಸಂಬಂಧಿಕರಿಗೆ ನೇಮಕಾತಿ ಆದೇಶ ನೀಡುವುದು ಕಾನೂನು ನಿಯಮವಿದೆ.ಆದರೆ,ಇಂತಹ ಘಟನೆಗಳಲ್ಲಿಯೂ ಕೂಡ , ಅರ್ಹ ಸಂಬಂಧಿಕ ಅಭ್ಯರ್ಥಿಯು ನೇಮಕಾತಿ ಆದೇಶ ಪಡೆಯಲು ಹೋದಾಗ ಅವರಿಂದ ಲಕ್ಷಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಮಾನವೀಯಕೃತ್ಯವಾಗಿದ್ದು ಅದು ಸಿಬ್ಬಂದಿಗಳನ್ನು ವರ್ಷವಿಡಿ ಮನ ಬಂದಂತೆ ವರ್ಗಾವಣೆ ಮಾಡುತ್ತಿದ್ದು ಅವರಿಂದ ಹಣ ವಸುಲಿ ಮಾಡುತ್ತಿದ್ದಾರೆ. ಅದರ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅಂತವರಿಗೂಕೂಡ ವರ್ಗಾವಣೆ ಮತ್ತು ಅಮಾನತು ಬೆದರಿಕೆ ಒಡ್ಡಲಾಗುತ್ತಿದ್ದು ಸಿಬ್ಬಂದಿಗಳು ಭಯದ ವಾತಾವರಣದಲ್ಲಿಯೇ ತಮ್ಮ ದಿನನಿತ್ಯದ ಕಾರ್ಯವನ್ನು ಮಾಡುತ್ತಿದ್ದಾರೆ.ಅಲ್ಲದೇ ಸಿಬ್ಬಂದಿಗಳು ತಮಗೆ ಬೇಕಾದಸ್ಥಳಕ್ಕೆ ವರ್ಗಾವಣೆ ಬಯಸಿದಾಗ ಅವರಿಂದ ಹಣದ ಬೇಡಿಕೆ ಇಟ್ಟು ಹಣವನ್ನುದೋಚುತ್ತಿದ್ದಾರೆ. ಶಿಕ್ಷಕ ಹಾಗೂ ಶಿಕ್ಷಕೇತರ ಹುದ್ದೆಗಳ ನೇರ ನೇಮಕಾತಿಯಲ್ಲಿ ಅವ್ಯವಹಾರ , ಅಭ್ಯರ್ಥಿಗಳಿಂದ ಲಕ್ಷಾನುಗಟ್ಟಲೇ ಹಣವನ್ನು ವಸೂಲಿ ಮಾಡಿ ನೇಮಕಾತಿ ಆದೇಶವನ್ನು ನೀಡಿದ್ದಾರೆ.ಇದಕ್ಕೆ ಪೂರಕವಾಗಿ ಪಶು ವೈದ್ಯಕೀಯ ಮತ್ತು ಪಶು ಸಂಗೋಪಾನ ಪದವಿ ಅರ್ಹತೆ ಇದ್ದ ಹುದ್ದೆಗೆ ಹೈನುಗಾರಿಕೆ ವಿಜ್ಞಾನದಲ್ಲಿ ಪದವಿ ಪಡೆದ ಅಭ್ಯರ್ಥಿಗೆ ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಿದ್ದಾರೆ.ನಾಳೆ ಜಿಲ್ಲೆಗೆ ರಾಜ್ಯಪಾಲರು ಆಗಮಿಸುತ್ತಿದ್ದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಎಸ್.ಕಟ್ಟಿಮನಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹನುಮಂತ ಮೇಟಿ, ವಿರುಪಾಕ್ಷಪ್ಪ, ತಾಯಪ್ಪ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.