ಕುಲಗಾಣ ಗ್ರಾ.ಪಂ. ಸದಸ್ಯರಾಗಿ ಕೆ.ಎಲ್. ಮಧುಚಂದ್ರ ಆಯ್ಕೆ

ಚಾಮರಾಜನಗರ, ಜ.04- ತಾಲ್ಲೂಕಿನ ಕುಲಗಾಣ ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಲ್. ಮಧುಚಂದ್ರ ರವರು ಭರ್ಜರಿ ಜಯಗಳಿಸಿದ್ದಾರೆ.
ಅವರು ಇತ್ತೀಚೆಗೆ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 314 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಶಿವಸ್ವಾಮಿ ರವರನ್ನು 28 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಈ ವೇಳೆ ಮಾತನಾಡಿದ ಕೆ.ಎಲ್. ಮಧುಚಂದ್ರ ಅವರು, ಗ್ರಾಮದ ಜನರು ಹಾಗೂ ಸ್ನೇಹಿತರ ಒತ್ತಾಸೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ನನ್ನನ್ನು ಬೆಂಬಲಿಸಿ ಹಗಲಿರುಳು ನನ್ನ ಗೆಲುವಿಗೆ ಶ್ರಮಿಸಿ ಗೆಲುವಿನ ದಡ ಸೇರಿಸಿದ ನನ್ನ ಸ್ನೇಹಿತರಿಗೂ, ಹಾಗೂ ನನ್ನನ್ನು ಆಶೀರ್ವದಿಸಿದ ಕುಲಗಾಣ ಗ್ರಾಮದ ಎಲ್ಲಾ ವರ್ಗದ ಜನರಿಗೂ, ಎಲ್ಲಾ ವರ್ಗದ ಮುಖಂಡರು, ಹಿರಿಯರಿಗೆ ನಾನು ತುಂಬಾ ಅಭಾರಿಯಾಗಿರುತ್ತೇನೆ ಎಂದÀು ಹರ್ಷ ವ್ಯಕ್ತಪಡಿಸಿದರು.
ಅಲ್ಲದೆ ಕುಲಗಾಣ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ಗ್ರಾಮವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತೇನೆ ಹಾಗೂ ನಿರ್ಗತಿಗರಿಗೆ ಸೂರು ಕಲ್ಪಿಸಲು ಆಶ್ರಯ ಹಾಗೂ ಇನ್ನಿತರೆ ವಸತಿಯೋಜನೆಗಳಡಿ ಮನೆ ನಿರ್ಮಾಣ ಮಾಡಲು ಮೊದಲ ಆಧ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕಾಗಿ ಎಲ್ಲರ ಸಹಕಾರ, ಬೆಂಬಲವನ್ನು ಕೋರುತ್ತೇನೆ ಎಂದು ತಿಳಿಸಿದರು.
ಗೆಲುವಿನ ನಂತರ ಗ್ರಾಮದ ಎಲ್ಲಾ ಮತದಾರರ ಮನೆಗಳಿಗೆ ಹೋಗಿ ಗ್ರಾಮ ಪಂಚಾಯತ್ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.