ಕುಲಕರ್ಣಿ ಗಿರಿರಾವಗೆ ಪಿ.ಎಚ್.ಡಿ.

ಬೀದರ್:ಎ.18: ನಗರದ ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಕುಲಕರ್ಣಿ ಗಿರಿರಾವ ಅವರು ಡಾ. ಸಿಂಧೆ ಜಗನ್ನಾಥ ಅವರ ಮಾರ್ಗದರ್ಶನದಲ್ಲಿ ಪ್ರಾಬ್ಲಮ್ಸ್ಸ್ ಸುಗರ್ ಕ್ಯಾನ್ ವರ್ಕರ್ಸ್ ಎ ಸೋಷಿಯಲೋಜಿಕಲ್ ಸ್ಟಡಿ ಆಫ್ ಬೀದರ್ ಡಿಸ್ಟ್ರ್ರಿಕ್ಟ್ (Problems of Sugarcan workers a Sociological study of Bidar Disrict)

ಎಂಬ ಪ್ರಬಂಧ ಮಂಡಿಸಿದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪಿ.ಎಚ್.ಡಿ.ಪದವಿ ಪ್ರಧಾನ ಮಾಡಿದೆ. ಶ್ರೀ ಕುಲಕರ್ಣಿ ಗಿರಿರಾವ ಅವರು ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಮೃತರಾವ ಚಿಮಕೋಡೆÀ, ಪ್ರಧಾನ ಕಾರ್ಯದರ್ಶಿ, ಗೋರ್ವಧನ ರಾಠೋಡ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.