ಕುರ್ಡಿ ಸುತ್ತಮುತ್ತ ಕೆಆರ್‌ಪಿ ಪಕ್ಷದ ಭರ್ಜರಿ ಪ್ರಚಾರ

ರಾಯಚೂರು,ಮಾ.೦೬- ಕೆಆರ್‌ಪಿ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿರುವ ಮನೆಮನೆಗೆ ತೆರಳಿ ಕೆ ಆರ್ ಪಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲಾಗಿದೆ ಮೊದಲ ಹಂತದಲ್ಲಿ ಕುರ್ಡಿ ಜಿಲ್ಲಾ ಪಂಚಾಯತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕೆ ಆರ್ ಪಿ ಪಕ್ಷದ ಮುಖಂಡ ಚೇತನ್ ರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಕಳೆದ ಎರಡು ದಿನಗಳಿಂದ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಪ್ರಾರಂಭ ಮಾಡಿರುವ ಕೆ ಆರ್ ಪಿ ಪಕ್ಷದ ಮುಖಂಡರು ಜಿಲ್ಲಾ ಪಂಚಾಯತಿವಾರು ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ಜನರ ಮುಂದೆ ತಿಳಿಸಿದರು.
ಸ್ಥಳೀಯ ಪಕ್ಷ, ಸ್ಥಳೀಯರಿಗೆ ಅವಕಾಶ ಮಾಡಿಕೊಡಿ,ಸದಾ ನಿಮ್ಮ ಜೊತೆಗೆ ಇರುವ ವ್ಯಕ್ತಿ ಖಾಸಿಂ ನಾಯಕ್ ಅವರ ಮೇಲೆ ನಂಬಿಕೆಯಿಡಿ,
ಜನಾರ್ಧನ್ ರೆಡ್ಡಿಯವರ ಮೇಲೆ ಭರವಸೆ, ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಎಲ್ಲವನ್ನು ಈಡೇರಿಸುವ ಪ್ರಾದೇಶಿಕ ಪಕ್ಷ ಕೆ,ಆರ್, ಪಿ,ಪಕ್ಷ ಈ ಭಾರಿ ೨೫ ರಿಂದ ೩೦ ಕ್ಷೇತ್ರಗಳಲ್ಲಿ ಗೆಲುವ ವಿಶ್ವಾಸವಿದೆ ಎಂದು ಪ್ರಚಾರದ ವೇಳೆ ಲಕ್ಷ್ಮಿಕಾಂತರೆಡ್ಡಿ ಜನರಲ್ಲಿ ಪಕ್ಷದ ಪರವಾಗಿ ಮನವಿ ಮಾಡಿದರು.
ಕೆ ಆರ್ ಪಿ ಪಕ್ಷದ ಖಾಸಿಂ ನಾಯಕ, ಚೇತನ್ ರೆಡ್ಡಿ,ಸುಧಾಕರ್ ರೆಡ್ಡಿ, ವೆಂಕಟೇಶ್ ರೆಡ್ಡಿ,ಲಕ್ಷ್ಮಿಕಾಂತರೆಡ್ಡಿ,ಖಾಜಾವಲಿ, ಗುರುಸ್ವಾಮಿ, ಸೀನು, ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಕುರ್ಡಿ ಪಂಚಾಯತಿಯಲ್ಲಿ ಬರುವ ಗೋರ್ಕಲ್,ಆರೋಲಿ, ರಾಜೊಳ್ಳಿ, ಅಡವಿ ಖಾನಾಪುರ,ವಲ್ಕ೦ದಿನ್ನಿ,ಕಂಬಳತ್ತಿ, ಸುಂಕೇಶ್ವರ, ಬಯಲ್ ಮರ್ಚಡ್,ಅರನಹಳ್ಳಿ, ರಾಜಲಬಂಡಾ, ತಮ್ಮಾಪೂರು, ಜೂಕೂರು, ಗ್ರಾಮಗಳಲ್ಲಿ ಕೆ ಆರ್ ಪಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ಕೈಗೊಂಡು ಅನೇಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಪ್ರಚಾರದ ಸಂದರ್ಭದಲ್ಲಿ ಕುರ್ಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕೆ ಆರ್ ಪಿ ಪಕ್ಷಕ್ಕೆ ಸೇರ್ಪಡೆಗೊಂಡರು..
ಬರುವ ಕೆಲವೇ ದಿನಗಳಲ್ಲಿ ಕೆ ಆರ್ ಪಿ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿಯವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ,ಪಕ್ಷದ ಪ್ರಣಾಳಿಕೆಗಳ ಜೊತೆಗೆ ಕುರ್ಡಿ ಜಿಲ್ಲಾ ಪಂಚಾಯತಿಯಲ್ಲಿ ಸಭೆಯನ್ನು ಮಾಡಲಾಗುವುದು, ಜನಾರ್ಧನ್ ರೆಡ್ಡಿ ನೇತೃತ್ವದಲ್ಲಿ ಬೇರೆ ಬೇರೆ ಪಕ್ಷದಲ್ಲಿರುವ ಹಲವಾರು ಹಿರಿಯ ಮುಖಂಡರು ಕೆ ಆರ್ ಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮುಖಂಡರಾದ ಗುರುಸ್ವಾಮಿ ತಿಳಿಸಿದರು.

ಬಾಕ್ಸ್
ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ, ಕ್ಷೇತ್ರದ ಹಲವಾರು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಕಷ್ಟ ಅನುಭವಿಸುತ್ತಿದ್ದಾರೆ, ಜಲ ಜೀವನ್ ಮಿಷನ್ ಹೆಸರಲ್ಲಿ ಕುಡಿಯಲು ನೀರು ಕೊಡುತ್ತೇವೆ ಎಂದು ಮಾಡಿದವರು ಈ ಕಡೆಗೆ ನೀರು ಇಲ್ಲಾ ಪೈಪ್ ಹಾಕಲು ರಸ್ತೆಯಲ್ಲಿ ತೋಡಿದ ತಗ್ಗುಗಳು ಮುಚ್ಚಿಲ್ಲ,ರಸ್ತೆ ಸರಿಯಿಲ್ಲ ನೀರು ಸರಿಯಿಲ್ಲ, ಇನ್ನೂ ರಸ್ತೆಗಳ ಸ್ಥಿತಿ ಹೇಳತೀರದು ಹಾಗಾಗಿ ಜನರೇ ಈ ಸಾರಿ ಬದಲಾವಣೆ ಬಯಸಿದ್ದಾರೆ ನಮ್ಮ ಪಕ್ಷಕ್ಕೆ ಹಲವಾರು ಜನ ಸ್ವಯಂ ಪ್ರೇರಿತರಾಗಿ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ ಎಲ್ಲಾ ಹಳ್ಳಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ, ಮುಂದಿನ ಹಂತದಲ್ಲಿ ಎಲ್ಲಾ ಹಳ್ಳಿಗಳ ಮನೆಮನೆಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆ ಆರ್ ಪಿ ಪಕ್ಷದ ಮುಖಂಡ ಖಾಸಿಂ ನಾಯಕ್ ತಿಳಿಸಿದರು.