ಕುರ್ಡಿ ಗ್ರಾಮ: ಮೇವಿನ ಬಣವೆಗೆ ಬೆಂಕಿ

ಮಾನ್ವಿ,ಮೇ.೧೮- ತಾಲೂಕಿನ ಕುರ್ಡಿ ಗ್ರಾಮದ ಅರೋಲಿ ರಸ್ತೆಯಲ್ಲಿ ಜಾನುವಾರುಗಳಿಗಾಗಿ ರೈತರು ಸಂಗ್ರಹಿಸಿದ ೧೫ಕ್ಕೂ ಹೆಚ್ಚಿನ ಭತ್ತದ ಹುಲ್ಲಿನ ಮೇವಿನ ಬಣವೆಗೆ ಬೆಂಕಿತಾಗಿದ್ದು ಭಾರಿ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಜನ ಹಾಗೂ ಜಾನುವಾರುಗಳಿಗೆ ಯಾವುದೆ ಹಾನಿ ಸಂಭವಿಸಿಲ್ಲ ರೈತರ ಲಕ್ಷಾಂತರ ಮೌಲ್ಯದ ಭತ್ತದ ಮೇವಿನ ಬಣವೆಗಳು ಸಂಪೂರ್ಣವಾಗಿ ಸುಟ್ಟು ಅವಘಡ ಸಂಭವಿಸಿದೆ.
ಮಾನ್ವಿ ವಿಭಾಗದ ಆಗ್ನಿಶಾಮಕ ಅಧಿಕಾರಿ ಹಾಜೀಮಿಯಾ ನೇತೃತ್ವದ ಆಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರು. ಮಾನ್ವಿ ಆಗ್ನಿಶಾಮಕ ಠಾಣೆಯ ೨ ಅಗ್ನಿಶಾಮಕ ವಾಹನಗಳು ಹಾಗೂ ರಾಯಚೂರಿನಿಂದ ಒಂದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬಿಡುಬಿಟ್ಟು ತಡ ರಾತ್ರಿಯವರೆಗೂ ಕಾರ್ಯಚಾರಣೆ ನಡೆಸಿ ಬೆಂಕಿಯ ಜ್ವಾಲೆಗಳು ಬೇರೆ ಪ್ರದೇಶಗಳಿಗೆ ವ್ಯಾಪಿಸದಂತೆ ತಡೆಯುವ ಮೂಲಕ ಹೆಚ್ಚಿನ ಅನಾಹುತಗಳನ್ನು ತಪ್ಪಿಸಿದರು.
ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಮಹೇಶಪಾಟಿಲ್ ಪರಿಶೀಲನೆ ನಡೆಸಿದರು.
ಗ್ರಾಮದ ಸಣ್ಣ ರೈತರು ತಮ್ಮ ಜಾನುವಾರುಗಳಿಗೆಂದು ಸಂಗ್ರಹಿಸಿದ ಭತ್ತದ ಹುಲ್ಲಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ರೈತರಿಗೆ ನಷ್ಟವಾಗಿದ್ದು ಜಾನುವಾರುಗಳಿಗೆ ಆಹಾರದ ಕೊರತೆಯುಂಟಾಗಿದೆ ಸರಕಾರದಿಂದ ರೈತರಿಗೆ ಅಗತ್ಯವಾದ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥಾರು ಆಗ್ರಹಿಸುತ್ತಿದ್ದಾರೆ.