ಕುರ್ಡಿ ಗ್ರಾಮದಲ್ಲಿ ದದ್ದಲ್ ಜನಾಶೀರ್ವಾದ ಮತಯಾಚನೆ

ರಾಯಚೂರು, ಮೇ.೦೬- ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿರುಸಿನ ಪ್ರಚಾರ ಕೈಗೊಂಡರು.
ಚುನಾವಣೆ ಪ್ರಚಾರ ಮತ್ತು ಮನೆ ಮನೆಗೆ ಮತಯಾಚನೆ ಸಂದರ್ಭದಲ್ಲಿ ಗ್ರಾಮಸ್ಥರು ಜೆಸಿಬಿ ಮೂಲಕ ಹಾರ ಮತ್ತು ಡೊಳ್ಳು, ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು
ಕುರ್ಡಿ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಭದ್ರಕೋಟಿ ಮತ್ತೊಷ್ಟು ಕೈ ಬಲಪಡಿಸಲು ಅದ್ದೂರಿಯಾಗಿ ಸ್ವಾಗತ ಕೋರಿದರು.
ನಂತರ ಮಾತನಾಡಿದ ಅವರು,ಕುರ್ಡಿ ಗ್ರಾಮದ ಜನರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ, ನಿಮ್ಮ ಮನೆಯ ಮಗನಾಗಿ, ನಿಮ್ಮ ಸೇವಕನಾಗಿ ಕೆಲಸ ಮಾಡುವೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತಕುಮಾರ್, ಸಿದ್ದನಗೌಡ ಗಾರಲದಿನ್ನಿ,ಹಾಲುಮತ ಸಮಾಜದ ಪ್ರಭಾವಿ ಮುಖಂಡರಾದ ಎಂ ಈರಣ್ಣ,ಹೋರಾಟಗಾರರಾದ ಅಂಬಣ್ಣ ಆರೋಲಿಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಸ್ಲಾಂಪಾಷ ರವರು ಹಾಗೂ ಗಿಲ್ಲೇಸೂಗೂರ ಬ್ಲಾಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ತಾಯಣ್ಣ ನಾಯಕ,ಕೆ ಶರಣಪ್ಪ, ನಾಗೇಂದ್ರಪ್ಪ ಮಟಮಾರಿ, ಹಾಗೂ ಹಿರಿಯ ಮುಖಂಡರುಗಳು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಶಾಸಕರಾದ ಬಸನಗೌಡ ದದ್ದಲ್ ರವರ ಅಭಿವೃದ್ಧಿಯ ಕಾರ್ಯಗಳನ್ನು ಮೆಚ್ಚಿ ಸ್ವಾಮಿದಾಸ ಕುರ್ಡಿ ರವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.ಕುರ್ಡಿ ಗ್ರಾಮ ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ, ನಿಮ್ಮ ಆರ್ಶಿವಾದದಿಂದ ಮತ್ತೊಮ್ಮೆ ಗ್ರಾಮೀಣ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು, ದಿನದ ೨೪ತಾಸು ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ, ನನ್ನ ಕುಟುಂಬಕ್ಕೆ ಕೂಡ ಸಮಯ ಕೊಟ್ಟಿಲ್ಲ, ನನ್ನ ಕುಟುಂಬ ಎಂದರೆ ರಾಯಚೂರು ಗ್ರಾಮೀಣ ಕ್ಷೇತ್ರದ ಜನರು ಆ ಕುಟುಂಬಕ್ಕಾಗಿ ದುಡಾಯುತ್ತೇನೆ ರಾಯಚೂರು ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಕೆಲಸ ಮಾಡಿದ್ದೇನೆ,ಕುರ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೂಡ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಮತ್ತೊಮ್ಮೆ ಆಶೀರ್ವಾದ ಮಾಡಿ ರಾಯಚೂರು ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು