ಕುರ್ಕಿ ಸರ್ಕಾರಿ ಪ್ರೌಢಶಾಲೆಗೆ ಕುಡಿಯುವ ನೀರಿನ ಫಿಲ್ಟರ್ ಕೊಡುಗೆ.

ದಾವಣಗೆರೆ ಜೂ 26: ಗ್ರಾಮೀಣ ಪ್ರದೇಶದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಕುರ್ಕಿ ಸರ್ಕಾರಿ ಪ್ರೌಢಶಾಲೆಗೆ ದಾವಣಗೆರೆಯ ಎ ಪಿ ಐ ಮತ್ತು ಸಿ ಸಿ ಎಸ್ ನ  ಮಾಜಿ ನಿರ್ದೇಶಕರಾದ ಕುರ್ಕಿ ಕೆ ಜಿ ವೇದಮೂರ್ತಿ ಗೌಡ್ರು  25 ಸಾವಿರ ರೂಪಾಯಿ ಮೌಲ್ಯದ ಕುಡಿಯುವ ನೀರಿನ ಫಿಲ್ಟರ್ ನ್ನು ಇಂದು ಕೂಡುಗೆಯಾಗಿ ನೀಡುವುದರೊಂದಿಗೆ ಈ ಶಾಲೆಯಲ್ಲಿ ಓದುತ್ತಿರುವ 160 ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ.ಅವರಿಗೆ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಮಕ್ಕಳು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.