ಕುರೇಕುಪ್ಪ ಗ್ರಾಮದಲ್ಲಿ ಗುಂಪು ಸಭೆಗಳ ಮೂಲಕ ಅರಿವು ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು:ಜು:6- ತಾಲೂಕಿನ  ಕುರೇಕುಪ್ಪ ಗ್ರಾಮದ ಎರಡನೇ ವಾರ್ಡಿನಲ್ಲಿ  “ಸಮುದಾಯ ಜಾಗೃತಿಕರಣ ಪಾಕ್ಷಿಕ” ಅಂಗವಾಗಿ ಮಕ್ಕಳ ತಾಯಂದಿರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಕುರಿತು ಗುಂಪು ಸಭೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸ್ಥಿರವಾಗಿಡಲು ಕುಟುಂಬ ಕಲ್ಯಾಣ ಯೋಜನೆಯನ್ನು ಅಳವಡಿಸಿ ಕೊಳ್ಳಬೇಕಿದೆ, ಜನಸಂಖ್ಯೆಯಿಂದ ಹಲವು ಸಮಸ್ಯೆಗಳು ಉಂಟಾಗಬಹುದು,
     ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ಕಾಪರ್-ಟಿ 380 ಎ, ನುಂಗು ಮಾತ್ರೆ ಮಾಲಾ-ಎನ್, ಛಾಯ, ಚುಚ್ಚುಮದ್ದು ಅಂತರ ಇನ್ ಜೆಕ್ಷನ್, ಮತ್ತು ಕಾಂಡೋಮ್ ಗಳ ಕುರಿತು ಮಾಹಿತಿನ್ನು ನೀಡಿದರು, ಮಕ್ಕಳ ನಡುವೆ ಅಂತರತೆ ಇದ್ದಲ್ಲಿ  ತಾಯಿ ಮತ್ತು ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ,  ಮೂರು ವರ್ಷದ ನಂತರ ಮತ್ತೊಂದು ಮಗು ಪಡೆದ ನಂತರ ಶಾಶ್ವತ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡು ಕುಟುಂಬ ನಿಯಂತ್ರಿಸ ಬೇಕಿದೆ,
 ಕುಟುಂಬ ನಿಯಂತ್ರಿಸಿ ಜನಸಂಖ್ಯಾ ಸ್ಥಿರತೆ ಕಾಪಾಡದಿದ್ದರೆ ವಿಶ್ವದಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಏರಿಕೆ ಆಗಬಹುದು, ಎರಡು ಮಕ್ಕಳ ಚಿಕ್ಕ ಕುಟುಂಬ ಇದ್ದರೆ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ, ಇದಕ್ಕೆ ಕುಟುಂಬ ಕಲ್ಯಾಣ ಯೋಜನೆಯೇ ಉತ್ತಮ ಮಾರ್ಗ  ಎಂದು ತಿಳಿಸಿದರು,
ಈ ಸಂದರ್ಭದಲ್ಲಿ  ಆಶಾ ಫೆಸಿಲಿಟೇಟರ್ ಬಸಮ್ಮ, ಆಶಾ ಕಾರ್ಯಕರ್ತೆ ನೀಲಮ್ಮ, ತಾಯಂದಿರಾದ  ಸುಮಲತಾ, ಅನ್ನಪೂರ್ಣ, ಪಾರ್ವತಮ್ಮ, ನೇತ್ರಾವತಿ, ಕಮಲಮ್ಮ,ಪೂಜಾ,ಲಕ್ಷ್ಮಿದೇವಿ, ಹೊನ್ನುರಮ್ಮ,ದುರಗಮ್ಮ,ಎರ್ರಮ್ಮ,ಹುಲಿಗೆಮ್ಮ,ದೇವಿ,ಲಕ್ಷ್ಮಿ, ಗೋವಿಂದಮ್ಮ ಇತರರು ಉಪಸ್ಥಿತರಿದ್ದರು