
ಸಂಜೆವಾಣಿ ವಾರ್ತೆ
ಬಳ್ಳಾರಿ. ಜ,17 ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಪಟ್ಟಣಕ್ಕೆ ಕೈಗಾರಿಕೆಗಳಿಂದ ಸಿಲಿಕಾ ಮಿಶ್ರಿತ ಧೂಳು, ಕಲುಶಿತ ಹೊಗೆ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಆವರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಜಿ.ಪಂಪನಗೌಡ ಒತ್ತಾಯಿಸಿದ್ದಾರೆ.
ಪ್ರಾಂತ ರೈತ ಸಂಘ ಮತ್ತು ಕರವೇ ಸಂಘಟನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿಲಿಕಾ ಮಿಶ್ರಿತ ಧೂಳು, ಕಲುಶಿತ ಹೊಗೆ ಹಾಗೂ ಕಪ್ಪು ಬಣ್ಣದ ಕಿಟ್ಟದಿಂದ ಜನರು, ಜಾನುವಾರುಗಳು ಅಲರ್ಜಿ ಸೇರಿದಂತೆ ಇತರ ರೋಗಗಳಿಗೆ ತತ್ತರಿಸುತ್ತಿದ್ದಾರೆ. ಮಾಲಿನ್ಯ ಸೂಸುವ ಕೈಗಾರಿಕೆಗಳ ವಿರುದ್ಧ ಸರ್ಕಾರವು ಸೂಕ್ತ ಕಾನೂನು ಕ್ರಮವಹಿಸಬೇಕು ಎಂದರು.
ವರ್ಷದಿಂದ ವರ್ಷಕ್ಕೆ ಕಲುಶಿತ ಧೂಳಿನ ಪ್ರಮಾಣ ಹೆಚ್ಚಿ. ಆಹಾರ, ತರಕಾರಿ ಬೆಳೆಗಳ ಮೇಲೆ ಆವರಿಸುತ್ತಿದೆ. ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ಇಲಾಖೆಯವರು ಕಾನೂನು ಬಾಹಿರ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕುರೆಕುಪ್ಪ ಪುರಸಭೆ ಸದಸ್ಯ ಕಲ್ಗುಡಿಯಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಫಸಲು ಕೈಗೆ ಸೇರಿ ರೈತರ ಬದುಕು ಹಸನಾಗುತ್ತದೆಂಬ ಕನಸು ಕಟ್ಟಿದ್ದೆವು. ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿದಮೇಲೆ ಅರ್ಧಬೀಜ ಮೊಳಕೆ ಒಡೆದು ಬೆಳೆ ಬೆಳೆದರು ತೆನೆ ಬರದೆ ರೈತರ ಬದುಕು ಕಮರಿಹೊಗಿದೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು, ಕಳಪೆ ಬೀಜ ವಿತರಕರಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಕರವೇ ಅಧ್ಯಕ್ಷ ಯು.ಅಂಜಿನಪ್ಪ, ಮುಖಂಡರಾದ ಮಲ್ಲಯ್ಯ, ದೇವಣ್ಣ, ಶಿವರುದ್ರಗೌಡ, ಚನ್ನಬಸವನ ಗೌಡ, ವೀರನ ಗೌಡ, ಜಿ.ಮಂಜುನಾಥ, ಯು.ಹನುಮಂತಪ್ಪ, ಕರಿಯಪ್ಪ, ರಾಮಪ್ಪ, ಡಿ.ನಾಗರಾಜ ಮತ್ತು ತಿಮ್ಮನಗೌಡ ಇದ್ದರು.