ಕುರೇಕುಪ್ಪದಲ್ಲಿ ಜೋಡಿ ರಥೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು:ಏ9: ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಹಂಪಿ ಹುಣ್ಣಿಮೆಯ ಅಂಗವಾಗಿ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಹಂಪಮ್ಮನ ರಥೋತ್ಸವದ ಅಂಗವಾಗಿ ಇಡೀ ಗ್ರಾಮದ ಭಕ್ತರು ಸಂಭ್ರಮದಿಂದ ಆಚರಿಸಿದರು, ಈ ಸಂದರ್ಭದಲ್ಲಿ ಕಳೆದ ಮೂರು ದಿನಗಳಿಂದಲೇ ವಿಶೇಷವಾಗಿ ಸಿದ್ದತೆಯನ್ನು ಮಾಡಿಕೊಂಡು ಹಂಪಿ ಹುಣ್ಣಿಮೆಯ ದಿನ ವಿರೂಪಾಕ್ಷೇಶ್ವರನಿಗೆ ವಿಶೇಷವಾದ ನೈವೇದ್ಯ ಸಮರ್ಪಿಸಿ ಎಲ್ಲಾ ಭಕ್ತರು ಮಹಾ ಮಂಗಳಾರತಿ ಸಮರ್ಪಿಸಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ತಂದು ವಿಶೇಷ ಮೆರವಣಿಗೆಯನ್ನು ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಿದರು, ನಂತರ ಜೋಡಿ ರಥಗಳನ್ನೂ ಸಹ ಎಳೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಭಕ್ತರು ರಥದ ಗಾಲಿಗೆ ತೆಂಗಿನ ಕಾಯಿ, ಬಾಳೆ ಹಣ್ಣು ಸಮರ್ಪಿಸಿದರು.