ಕುರೇಕುಕಪ್ಪ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಂಡೂರು :ಮೇ:25:  ಸಂಡೂರು ತಾಲ್ಲೂಕಿನ ಕುರೇಕುಪ್ಪ ಗ್ರಾಮದಲ್ಲಿ ನೀರಿನ ಸಮಸ್ಯೆ ಅಬ್ಬರವಾಗಿ ಸಾರ್ವಜನಿಕರನ್ನ ಕಾಡುತ್ತಿದ್ದು, ಕುರೇಕುಪ್ಪ ಪುರಸಭೆಯ ಆಡಳಿತವರ್ಗ ನೀರಿನ ಸಮಸ್ಯೆಗೆ ಪರಿಹಾರ ಕಾಣದೇ ಮೌನವಾಗಿರುವುದು ಸರ್ವಾಧಿಕಾರಿ ಆಡಳೀತವೇ ಕಾರಣ. ಸರ್ವಾದಿಕಾರರ ಪುರಸಭೆ ಆಡಳಿತ ವಿರುದ್ದ ಪ್ರತಿಭಟಿಸಿ ತಾಲ್ಲೂಕಿನ ತೋರಣಗಲ್ಲು ಬಳಿ ಇರುವ ಕುರೆಕುಪ್ಪ ಗ್ರಾಮದ 4ನೇ ವಾರ್ಡಿನ ಪರಿಶಿಷ್ಠರ ಕಾಲೋನಿಯಲ್ಲಿ3 ವರ್ಷಗಳಿಂದ ಕುಡಿಯುವ ನೀರಿನ ಬಳಕೆಯ ಸಮಸ್ಯೆ ಉಂಟಾಗಿದ್ದು, ನೀರಿನ ಸಮಸ್ಯೆಯನ್ನು ಬಗೆಹರಿಸಲು ಪುರಸಭೆಯ ಮುಖ್ಯಾಧಿಕಾರಿಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಕುರೇಕುಪ್ಪ ಗ್ರಾಮದ ಪುರಸಭೆಯ ಮುಂದುಗಡೆ ಪ್ರತಿಭಟೆನಯನ್ನು ನೆಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ 4ನೇ ವಾರ್ಡಿನ ಮಹಿ¼ ಅಂಜಿನಮ್ಮ ಮಾತನಾಡಿ ನಮ್ಮ ಕಾಲೋನಿಗೆ ಪುರಸಭೆಯ ಸಿಬ್ಬಂದಿ ಸಕಾಲಕ್ಕೆ ನೀರು ಬಿಡುತ್ತಿಲ್ಲ. ನಿತ್ಯ ನೀರನ್ನು ಬೇರೆ ವಾರ್ಡಿನಿಂದ ತರಬೇಕಾಗಿದೆ. ನೂತನವಾಗಿ ಪೈಪ್‍ಲೈನ್ ಕಾಮಗಾರಿ ಹಮ್ಮಿಕೊಳ್ಳುವುದರ ಮೂಲಕ ನೀರಿನ ಸಮಸ್ಯೆ ಬಗೆಹರಿಸುವಂತೆ ವಾರ್ಡನ್ ಸದಸ್ಯರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು, ಪ್ರಯೋಜನವಾಗಿಲ್ಲ. 4ನೇ ವಾರ್ಡಿನ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆಯ ಘಂಟೆಯನ್ನು ಭಾರಿಸಿದರು.
ಕರ್ನಾಟಕ ರಕ್ಷಣಾವೇದಿಕೆಯ ಅಧ್ಯಕ್ಷ ಆಂಜಿನೇಯ ಮಾತನಾಡಿ ಕುರೇಕುಪ್ಪ ಪಟ್ಟಣದ 1,2,4 ವಾರ್ಡ್‍ಗಳ ಪರಿಶಿಷ್ಠರ ಕಾಲೋನಿಯಲ್ಲಿ ಅವೈಜ್ಞಾನಿಕ ಹಳೆಯ ಪೈಪ್ ಲೈನ್ ಕಾಮಗಾರಿಯಿಂದ 3 ವಾರ್ಡುಗಳಿಗೂ ನೀರಿನ ಸಮಸ್ಯೆ ನಿರಂತರವಾಗಿದ್ದು, ಪುರಸಭೆಯ ಅಧಿಕಾರಿಗಳು ತ್ವರಿತವಾಗಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
 ಪ್ರತಿಕ್ರಿಯೆ :
ನೀರಿನ ಸಮಸ್ಯೆಯ ಕಾಲೋನಿಗಳಿಗೆ ಈಗಾಗಲೇ ಭೇಟಿ ನೀಡಿ ಪರೀಶಿಲಿಸಲಾಗಿದೆ. ನೂತನ ನೀರಿನ ಪೈಪ್ ಲೈನ್ ಕಾಮಗಾರಿಯನ್ನು ತ್ವರಿತವಾಗಿ ಹಮ್ಮಿಕೊಂಡು ಸಾರ್ವಜನಿಕರ ತೊಂದರೆಗಳ ಸಮಸ್ಯಗಳ ಬಗೆಹರಿಸಲಾಗುವುದು ಎಂದು ಪುರಸಭೆಯ ಮುಖ್ಯಾದಿಕಾರಿ ಪ್ರತಿಕ್ರಿಯಿಸಿ ಪ್ರತಿಭಟನೆ ಮಹಿಳೆಯರನ್ನು ಸಮಾಧಾನ ಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಮಾರೆಕ್ಕ, ನಾಗರತ್ನ, ಲಕ್ಷ್ಮೀ, ಸಿದ್ದಮ್ಮ, ಮಹಾದೇವಿ ದುಗ್ಗೆಮ್ಮ, ತಿಪ್ಪಮ್ಮ, ಗೀತ ಸಂಗೀತ, ಮಾರುತಿ ಕುಮಾರಸ್ವಾಮಿ ಅಂಜಿನಪ್ಪ ಮುಂತಾದವರು ಪ್ರತಿಭಟನೆಯ ಸಮಯದಲ್ಲಿ ಭಾಗವಹಿಸಿದರು.