ಕುರೆಕುಕಪ್ಪದಲ್ಲಿ ವಿದ್ಯಾರ್ಥಿಗಳಿಗೆ ನೊಟ್ ಪುಸ್ತಕ ವಿತರಣೆ

ಸಂಡೂರು:ಏ:4 ಹಲವಾರು ಸಂಘ ಸಂಸ್ಥೆಗಳು ಮಹಾತ್ಮರ ಜಯಂತಿಗಳನ್ನು ಆಡಂಬರ ರೂಪದಲ್ಲಿ ಮೆರವಣಿಗೆ ನಂದಿ ಕೋಲು, ಡೊಳ್ಳು, ಸಮಾಳಗಳನ್ನು ಬಾರಿಸುವುದರ ಮೂಲಕ ವಿಜೃಂಬಣೆಯಿಂದ ಆಚರಿಸಿ ಕರತಾಡನ ಸ್ವೀಕರಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಹುಂಬುತನ ಅನೇಕ ಸಂಸ್ಥೆಗಳಲ್ಲಿದೆ. ಆದರೆ, ಕುರೇಕುಪ್ಪ ಪುಟ್ಟ ಗ್ರಾಮದಲ್ಲಿ ನಡೆದಾಡುವ ದೇವರು ತ್ರಿವಿದ ದಾಸೋಗಿಗಳು ನಿಂಗಾ ಸಮಾಜ ಪ್ರೇಮಿಗಳು, ಮಕ್ಕಳಲ್ಲೇ ಶಿವನನ್ನು ಕಂಡವರು ಆದ ತುಮಕೂರಿನ ಬಳಿ ಇರುವ ಕ್ಯಾತ್ ಸಂದ್ರದ ಡಾ|| ದಿ. ಲೀ., ಶಿವಕುಮಾರ ಸ್ವಾಮಿಜಿಯವರ ಹುಟ್ಟು ಹಬ್ಬವನ್ನು ಡಾ|| ಬಿ.ಆರ್. ಅಂಬೇಡ್ಕರ ಸಂಘದವರು ವಿದ್ಯಾರ್ಥಿಗಳಿಗೆ ಬರಹ ಪುಸ್ತಕಗಳನ್ನು ನೀಡುವುದುರ ಮೂಲಕ ಪರಮಪೂಜ್ಯಶ್ರೀಗಳ ಹುಟ್ಟು ಹಬ್ಬವನ್ನ ಸರಳ ರೀತಿಯಲ್ಲಿ ಆಚರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ಬರಹ ಪುಸ್ತಕ ನೀಡುವ ಸಂದರ್ಭದಲ್ಲಿ ಬಸಪ್ಪ ಸ್ವಾಮಿಜಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಈರಣ್ಣ ಸಂಘದ ಅಧ್ಯಕ್ಷ ಹುಲುಗಪ್ಪ ಮುಖಂಡರಾದ ಹನುಮಂತಪ್ಪ, ಎತ್ತಿನಟ್ಟಿ ಸಣ್ಣಸ್ವಾಮಿ ಕೆ. ಸ್ವಾಮಿ, ಹಾಗೂ ಅಂಜಿನಿ ಉಪಸ್ಥಿತರಿದ್ದರು.