ಕುರುಹಿನಶೆಟ್ಟಿ ಸಮಾಜದ ಬಡ ನೇಕಾರರಿಗೆ ಆಹಾರ ಕಿಟ್ ವಿತರಣೆ

ವಿಜಯಪುರ, ಜೂ.3-ಕರೋನಾದ ದಾಳಿಯಿಂದಾಗಿ ಲಾಕ್ ಡೌನ್ ಕಾಲದ ಉದ್ಯೋಗವಿಲ್ಲದೇ ಸಂಕಷ್ಟದ ಪರಿಸ್ಥಿಯಲ್ಲಿ ಸಿಲುಕಿ, ನರಳುತ್ತಿರುವ ವಿಜಯಪುರ ಜಿಲ್ಲೆಯ, ತಾಳಿಕೋಟಿ ತಾಲೂಕಿನ, ಬಾವೂರ ಗ್ರಾಮದಲ್ಲಿ ಶ್ರೀ ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಸಂಧ್ಯಾ ಸೋಮಶೇಖರ್ ಸೇವಾ ಟ್ರಸ್ಟ್ ವತಿಯಿಂದ ಕುರುಹಿನಶೆಟ್ಟಿ ಸಮಾಜದ ಬಡ ನೇಕಾರರಿಗೆ ಆಹಾರ ಕಿಟ್ ವಿತರಿಸಲಾಯಿತು.
ವೀರಶೈವ ಲಿಂಗಾಯತ ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ಮತ್ತು ಸಂಧ್ಯಾ ಸೋಮಶೇಖರ್ ಸೇವಾ ಟ್ರಸ್ಟ್ ಆಗಿದ್ದು, ಮಹಾಮಾರಿ ಕರೋನಾ ವೈರಸ್ ದಿಂದ ಜನರ ಸ್ಥಿತಿಗತಿ ತುಂಬಾ ಕಷ್ಟಕರವಾಗಿದ್ದು, ಅದರಲ್ಲೂ ಕುರುಹಿನ ಶೆಟ್ಟಿ ನೇಕಾರರ ಬದುಕು ಅಧೋಗತಿಗೆ ಇಳಿದಿದೆ.
ನೇಕಾರರು ತಯಾರಿಸುವ ಸೀರೆಗಳು ಮಾರಾಟವಾಗುತ್ತಿಲ್ಲ. ನೇಕಾರಿಕೆಗೆ ಬೇಕಾದ ವಸ್ತುಗಳು ಸಿಗುತ್ತಿಲ್ಲ. ಅವರಿಗೆ ಸರಿಯಾಗಿ ಕುಳಿಯು ಸಿಗುತ್ತಿಲ್ಲ. ಹೀಗಾಗಿ ನೇಕಾರರು ಕಷ್ಟ ಅನುಭವಿಸುತ್ತಿದ್ದಾರೆ. ನೇಕಾರರ ಬಾಳು ನೀರಿನಿಂದ ಹೊರತೆಗೆದ ಮೀನಿನಂತೆ ಆಗಿದೆ. ಈ ಸ್ಥಿತಿಯಲ್ಲಿ ಸುಮಾರು 45ಕ್ಕೂ ಹೆಚ್ಚು ಬಡ ನೇಕಾರರಿಗೆ ಆಹಾರ ಕಿಟ್ ನೀಡಲಾಯಿತು.
ಈ ಸಂದರ್ಭದಲ್ಲಿ ನೀಲಕಂಠೇಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರು ಆದ ಶಿವುಕುಮಾರ ಮುರಾಳ, ಉಪಾಧ್ಯಕ್ಷರು ಆದ ನೆಹರು ಮ್ಯಾಗಡಿ, ಕಾರ್ಯದರ್ಶಿ ಮಂಜುನಾಥ ಅರಬಿ, ಸಮಾಜದ ಹಿರಿಯರಾದ ಈರಣ್ಣ ಕಾರಗನೂರ, ಹನಮಂತಪ್ಪ ಅರಬಿ, ಈರಣ್ಣ ನವಲಿ, ಶಂಕ್ರಪ್ಪ ಅಸ್ಕಿ, ಪುಂಡಲೀಕಪ್ಪ ಅಗ್ನಿ, ರಾಮಚಂದ್ರಪ್ಪ ಮ್ಯಾಗಡಿ ಮತ್ತು ಯುವಕರೂ ಇದರಲ್ಲಿ ಭಾಗಿಯಾಗಿದ್ದರು.