ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಜ.15 ರಂದು ಕಾಗಿನೆಲೆಯಿಂದ ಪಾದಯಾತ್ರೆ

ಬಳ್ಳಾರಿ, ನ.14- ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ಜ.15 ರಂದು ಕಾಗಿನೆಲೆಯಿಂದ ನಾಲ್ಕು ಜನ ಗುರುಗಳು ಮತ್ತು ಸಂಘ, ಸಂಸ್ಥೆಗಳನ್ನು ಜೊತೆಗೂಡಿಸಿ ಪಾದಯಾತ್ರೆ ಆರಂಭಗೊಂಡು ಫೆ. 7 ಕ್ಕೆ ಬೆಂಗಳೂರು ತಲುಪಲಿದ್ದು 10 ಲಕ್ಷ ಜನರೊಂದಿಗೆ ಸಮಾವೇಶ ನಡೆಯಲಿದೆಂದು ಮಾಜಿ ಸಂಸದ ಕುರುಬ ಸಮುದಾಯದ ಮುಖಂಡ ಕೆ. ವಿರೂಪಾಕ್ಷಪ್ಪ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಟಿ ‌ನಡೆಸಿ‌ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತು ಕಾಗಿನೇಲೆ ಪೀಠದ ಗುರುಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.ಪಕ್ಷ ಬೇಧ ಇಲ್ಲದ, ಹೋರಾಟ ಪ್ರಾರಂಭಿಸಿದ್ದೇವೆ. ರಾಜ್ಯದ ಎಲ್ಲಾ ಕುರುಬ ಚುನಾಯಿತ ಪ್ರತಿನಿಧಿಗಳ ಸಮಾವೇಶ ಮಾಡಿದೆ. ಮಹಿಳಾ ಸಮಾವೇಶ ಕೂಡ ಮಾಡಲಾಗಿದೆ. ಇನ್ನು ಮುಂದೆ, ಬೆಳಗಾವಿ, ಮೈಸೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ ಸೇರಿದಂತೆ ಎಲ್ಲಾ ಕಡೆ ಸಮಾವೇಶ ಮಾಡುತ್ತೇವೆಂದರು.
ಎಸ್ಟಿ ಸಮುದಾಯದವರ 7.5% ಮೀಸಲಾತಿಗೆ ನಮ್ಮ ವಿರೋಧವಿಲ್ಲ. ನಮ್ಮದು ರಾಜಕೀಯ ಪ್ರೇರಿತ ಹೋರಾಟವೂ ಅಲ್ಲ ಎಂದ ಅವರು ಈ ಹೋರಾಟಕ್ಕೆ ಸಿದ್ದರಾಮಯ್ಯ ಅವರ ಬೆಂಬಲ ಇದೆ.ಕಾಗಿನೇಲೆ ಪೀಠದ ಗುರುಗಳು ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಿದ್ದಾರೆ. ನಾನು ಬಹಿರಂಗವಾಗಿ ಬರೋಲ್ಲಾ ಅಂತ ಹೇಳಿದ್ದಾರೆ ಮುಂದಿನ ದಿನಗಳಲ್ಲಿ ಬರಬಹುದು ಎಂಬ ವಿಶ್ವಾಸ ನಮಗೆ ಇದೆ ಎಂದರು.
ಈಶ್ವರಪ್ಪ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮುಂದಾಳತ್ವ ವಹಿಸಿದ್ದಾರೆಂದರು.
ಕುರುಬ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎರ್ರಿಗೌಡ, ಸಮುದಾಯದ ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಅಯ್ಯಾಳಿ ತಿಮ್ಮಪ್ಪ. ಶಶಿಕಲಾ ಮೋಹನ್, ಕಲ್ಕಂಬ ಪಂಪಾಪತಿ ಮೊದಲಾದವರು ಇದ್ದರು.