ಹುಬ್ಬಳ್ಳಿ,ಮಾ.26: ಕುರುಬ ಸಮುದಾಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡದಿರುವುದು ಸಮಸ್ತ ಕುರುಬ ಸಮುದಾಯಕ್ಕೆ ಅಸಮಾಧಾನ ಮೂಡಿಸಿದೆ ಈ ನಿಟ್ಟಿನಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಕುರುಬರ ಎಸ್.ಟಿ ಹೋರಾಟ ಸಮಿತಿಯ ಧಾರವಾಡ ಗೌರವ ಅಧ್ಯಕ್ಷ ಎಚ್.ಎಫ್.ಮುದಕಣ್ಣವರ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ 2 ಟಿಕೆಟ್ ಗಳನ್ನು ಕುರುಬ ಸಮುದಾಯಕ್ಕೆ ಅವಕಾಶ ಕಲ್ಪಿಸಿದೆ. ಆದರೇ ಬಿಜೆಪಿ ಅವಕಾಶ ಕಲ್ಪಿಸದೇ ಇರುವುದು ಬಿಜೆಪಿ ಪಕ್ಷದಲ್ಲಿರುವ ಕುರುಬ ಸಮುದಾಯಕ್ಕೆ ತೀವ್ರ ಬೇಸರ ಮೂಡಿಸಿದೆ.
ಕಳೆದ 30 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ತಳಮಟ್ಟದಿಂದ ಕಾರ್ಯ ನಿರ್ವಹಿಸಿ ಬಿಜೆಪಿ ಬೆಳವಣಿಗೆಗೆ ಶ್ರಮಿಸಿದ ಮುಖಂಡರಾದ ಶಿವಾನಂದ ಮುತ್ತಣ್ಣವರ ಅವರಿಗೆ ಈ ಬಾರಿ ಓಬಿಸಿ ಕೋಟಾದಲ್ಲಿ ಕುಂದಗೋಳ ವಿಧಾನಸಭಾ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಮುತ್ತಣ್ಣವರ, ಶರಣು ಕುರಿ, ಮಲ್ಲಿಕಾರ್ಜುನ ತಾಲೂರ್, ಶಿವಾನಂದ ಜೋಗಿ, ಯಲ್ಲಪ್ಪ ಕುಂದಗೋಳ ಉಪಸ್ಥಿತರಿದ್ದರು.