ಕುರುಬ ಸಂಘದ ಕನಕ ಭವನ ನಿರ್ಮಾಣಕ್ಕೆ ಶಾಸಕ ನಾಗೇಂದ್ರ 10 ಲಕ್ಷ ರೂಗಳ ಭರವಸೆ

ಬಳ್ಳಾರಿ ನ 17 : ನಗರದಲ್ಲಿರುವ ಬಳ್ಳಾರಿ ಜಿಲ್ಲಾ ಕುರುಬ ಸಂಘದ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ 10 ಲಕ್ಷ ರೂಗಳನ್ನು ನೀಡುವ ಭರವಶೆಯನ್ನು ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ನೀಡಿದ್ದಾರೆ. ಅವರು ನಿನ್ನೆ ಕುರುಬ ಸಂಘ ಕಚೇರಿಗೆ ಭೇಟಿ ನೀಡಿ ಕನಕ ಭವನದ ಕಾಮಗಾರಿ ವೀಕ್ಷಣೆ ಮಾಡಿದರು.
ಈಗಾಗಲೇ ಈ ಭವನದ ನಿರ್ಮಾಣಕ್ಕೆ ಹಿಂದುಳಿದ ವರ್ಗದ ಇಲಾಕೆಯಿಂದ 50 ಲಕ್ಷ ರೂಗಳು ದೊರೆತಿದೆ. ಮತ್ತೆ 50 ಲಕ್ಷ ರೂ ನೀಡುವಂತೆ ಕೋರಿದೆ. ಅಲ್ಲದೆ ಹಲವರಿಂದಲೂ ದೇಣಿಗೆ ಪಡೆಯುತ್ತಿದ್ದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು 10 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಭವನ ನಿರ್ಮಾಣ ಮಾಡಲು ಹೆಚ್ಚನ ಹಣದ ಅವಶ್ಯಕತೆ ಇದೆಂದು ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಶಾಸಕರಿಗೆ ತಿಳಿಸಿದರು. ತಕ್ಷಣ ಅದಕ್ಕೆ ಸ್ಪಂದಿಸಿದ ಶಾಸಕರು ಸಂಘಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆಂದು ಸಮಾಜದ ಮುಖಂಡರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಎ.ಮಲ್ಲೇಶ್, ಖಜಾಂಚಿ ಅಲ್ಲಿಪುರ ಕೆ.ಮೋಹನ್, ಸಮುದಾಯದ ಮುಖಂಡರುಗಳಾದ ಮಾಜಿ ಉಪ ಮೇಯರ್ ಕಣೇಕಲ್ ಬಸವರಾಜಗೌಡ. ಮೊದಲಾದವರು ಇದ್ದರು.