ಕುರುಬ ಸಂಘ:ಅನ್ನದಾಸೋಹ,ಹಣ್ಣು ಹಂಪಲು ವಿತರಣೆ

ರಾಯಚೂರು, ಮೇ.೩೧- ಕರ್ನಾಟಕ ಪ್ರದೇಶ ಯುವ ನಗರ ಘಟಕ ಕುರುಬ ಸಂಘ ವತಿಯಿಂದ ಅನ್ನದಾಸೋಹ ಹಾಗೂ ಹಣ್ಣು ಹಂಪಲುಗಳು ವಿತರಣೆ ಮಾಡಲಾಯಿತು.
ನಗರದ ಪ್ಲೇಸ್ಟೇಷನ್ ವೃತ್ತ ಹಾಗೂ ಆರ್ ಟಿ ಓ ಸರ್ಕಲ್ ಬಡವರ ಆಶ್ರಯ ಕಾಲೋನಿ ನವೋದಯ ಆಸ್ಪತ್ರೆ ಅಮ್ಮಂದಿರ ಹಿಂದ ಅನಾಥಾಶ್ರಮ ಕೇಂದ್ರೀಯ ಬಸ್ ನಿಲ್ದಾಣ ಬಸವೇಶ್ವರ ವೃತ್ತ, ಪಂಜಾಬ್ ಬಾಡ ದರ್ಗಾ,
ಸಂಮ್ ಶಾಲಾ ತಾತ ದರ್ಗಾ, ಕನಕದಾಸರು ವೃತ್ತ,ರಾಜೇಂದ್ರ ಗಂಜ್, ಮತ್ತು ಇತರ ಕಡೆ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷ ಮಂಜಣ್ಣ, ಮುಖಂಡರುಗಳಾದ ಜಂಬಣ್ಣ, ಹನುಮಂತಪ್ಪ ವಕೀಲ್ ,ನಾಗರಾಜ್ ಮಂಡಿಪೇಟೆ, ಬಡೇಸಾಬ, ರಾಮಣ್ಣ, ಯುವ ಮುಖಂಡರಾದ ನಗರ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ವೀರೇಶ್, ಸಂಚಾಲಕ ಲಕ್ಷ್ಮಣ್, ತಾಯಪ್ಪ, ಗಿಲೇರಿ, ಸುರೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.