ಕುರುಬ ಮತ್ತು ಗೊಂಡ ಸಮಾನ ಪದಗಳು

ಬಸವಕಲ್ಯಾಣ: ಡಿ.23:ಬೀದರ ಜಿಲ್ಲೆಯಲ್ಲಿ ಈಗಾಗಲೇ ಗೊಂಡ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದ್ದು ಇದು ನಮ್ಮ ಬಹು ವರ್ಷಗಳ ಬೇಡಿಕೆಯಾಗಿತ್ತು. ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಿಗಳಲ್ಲಿ ನೀಡಲಾದ ಪ್ರಮಾಣ ಪತ್ರಗಳನ್ನು ಕುರುಬ ಮತ್ತು ಗೊಂಡ ಸಮಾನ ಪದಗಳು ಎಂದು ಪುರಸ್ಕರಿಸಬೇಕು ಈಗಾಗಲೇ ರಾಜ್ಯ ಸರಕಾರ ಕೇಂದ್ರಕ್ಕೆ ಈ ವಿಷಯದ ಕುರಿತು ಶಿಫಾರಸ್ಸು ಮಾಡಿದ್ದು ಆದಷ್ಟು ಶೀಘ್ರದಲ್ಲಿ ರಾಜ್ಯ ಸರಕಾರದ ಶಿಫಾರಸ್ಸನ್ನು ಕೇಂದ್ರ ಸರಕಾರ ಪುರಸ್ಕರಿಸಬೇಕು ಎಂದು ಇಲ್ಲಿಯ ಶ್ರೀ ಮಹಾತ್ಮಾ ಬೊಮ್ಮಗೊಂಡೇಶ್ವರ ಗೊಂಡ ( ಕುರುಬ) ಸಮಾಜದ ವತಿಯಿಂದ ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗನಾಥ ಮೇತ್ರೆ, ಸುಭಾಷ ರೇಕುಳಗೆ, ರಾಜೇಶ ಮೇತ್ರೆ, ಝರೆಪ್ಪಾ ಮೇತ್ರೆ, ಸುರೇಶ ಬಿರಾದಾರ, ಚಂದ್ರಕಾಂತ ಮೇತ್ರೆ, ರಾಮಲಿಂಗ, ಶರಣಪ್ಪ, ಬೀರಪ್ಪ, ಅಂಕುಶ ಸೇರಿದಂತೆ ಸಮಾಜದ ಅನೇಕ ಜನರು ಉಪಸ್ಥಿತರಿದ್ದರು