ಕುರುಬರ ಸಂಘದ ಅಧ್ಯಕ್ಷರಾಗಿ ಗೌಡರ ಆಯ್ಕೆ

ಗುಳೇದಗುಡ್ಡ, ಮಾ 27: ಭಾರತ ದೇಶ ಹಲವು ಜಾತಿ ಧರ್ಮಗಳ ಸಮನ್ವಯದ ನೆಲೆವೀಡಾಗಿದೆ. ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು ಎಂದು ಚಿನ್ಮಯಾನಂದ ಸ್ವಾಮೀಜಿ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಜಿಲ್ಲಾ ಸಂಘದ ಆಶ್ರಯದಲ್ಲಿ ನಡೆದ ಗುಳೇದಗುಡ್ಡ ತಾಲ್ಲೂಕ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ. ಸಿದ್ದಾಪೂರ ಅಧ್ಯಕ್ಷತೆ ವಹಿಸಿ ಸಮಾಜದ ಸಂಘಟನೆ ಕುರಿತು ಮಾತನಾಡಿದರು. ಕುರುಬರ ಸಂಘದ ರಾಜ್ಯ ನಿರ್ದೇಶಕ ಶ್ರೀಶೈಲ ದಳವಾಯಿ, ಹನಮಂತ ಅಪ್ಪಣ್ಣವರ, ಮುಖಂಡರಾದ ಪ್ರಕಾಶ ಮೇಟಿ, ಜಿ.ಪಂ. ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಗೌಡರ, ಮಂಜು ಹೊಸಮನಿ, ಬಸವರಾಜ ಭೂತಾಳಿ, ಹನಮಂತ ಕಳ್ಳಿಗುಡ್ಡ, ಶಶಿ ಉದಗಟ್ಟಿ, ಮಲ್ಲು ಹುನಗುಂಡಿ, ಲೆಂಕೆಪ್ಪ ಹಿರೇಕುರುಬರ, ಶಿವಾನಂದ ಗೊರವರ ಇತರರು ಇದ್ದರು.
ಪದಾಧಿಕಾರಿಗಳ ಆಯ್ಕೆ: ಗುಳೇದಗುಡ್ಡ ತಾಲ್ಲೂಕ ಕುರುಬರ ಸಂಘಕ್ಕೆ ನಾಗಪ್ಪ ವೈ. ಗೌಡರ (ಅಧ್ಯಕ್ಷ), ನಿಂಗಪ್ಪ ವಾಲೀಕಾರ (ಕಾರ್ಯಾಧ್ಯಕ್ಷ), ಡಾ. ಎಚ್.ಎಸ್. ಘಂಟಿ (ಕಾರ್ಯದರ್ಶಿ), ಯುವ ಘಟಕ್ಕೆ ಮಲ್ಲು ಹುನಗುಂಡಿ (ಅಧ್ಯಕ್ಷ), ಮಂಜುನಾಥ ಜಡಿ (ಕಾರ್ಯದರ್ಶಿ)ಗಳಾಗಿ ಆಯ್ಕೆಯಾದರು.