ಕುರುಬರ ಎಸ್.ಟಿ ಹೋರಾಟ ಸಮಿತಿಗೆ ಅಧ್ಯಕ್ಷರ ನೇಮಕ

ಕೋಲಾರ,ನ.೩- ಕುರುಬರ ಎಸ್.ಟಿ ಹೋರಾಟ ಸಮಿತಿ ಕೋಲಾರ ಜಿಲ್ಲಾಧ್ಯಕ್ಷ ತಂಬಳ್ಳಿ ಮುನಿಯಪ್ಪ ನವರು ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರನ್ನು ಹಾಗೂ ಮಹಿಳಾ ಘಟಕ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.
ಕುವೆಂಪು ನಗರದ ಕನಕ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಡೆದ ಜಿಲ್ಲಾ ಕುರುಬರ ಎಸ್.ಟಿ ಹೋರಾಟ ಸಮಿತಿ ಸಭೆಯಲ್ಲಿ ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ಶ್ರೀನಿವಾಸ್ ಬೆಗ್ಲಿ, ಮಹಿಳಾ ಘಟಕ ಶಾಂತಮ್ಮ ನರಸಾಪುರ ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷರಾಗಿ ಕೆ.ವಿ.ಮಂಜುನಾಥ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷರಾಗಿ ನಾಗರಾಜ್, ಎ.ಸುಮಾ, ಕೆಜಿಎಫ್ ತಾಲ್ಲೂಕು ಅಧ್ಯಕ್ಷರಾಗಿ ಭತ್ಯಪ್ಪ ಬಡಮಾಕನಹಳ್ಳಿ, ಶಿಲ್ಪ ಮೋಹನ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಎಂ.ಶಂಕರ್ ಗುಲ್ಲಹಳ್ಳಿ, ಪದ್ಮಾವತಮ್ಮ, ಮಾಲೂರು ತಾಲ್ಲೂಕು ಅಧ್ಯಕ್ಷರಾಗಿ ದೇವರಾಜ್ ಆನೇಪುರ, ಎಸ್.ಕಾವ್ಯ ಬೈರನಹಳ್ಳಿ ರವರನ್ನು ನೇಮಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿದೇರ್ಶಕ ಅಪ್ಪೇಗೌಡ, ರಾಜ್ಯ ಕುರುಬರ ಎಸ್‌ಟಿ ಹೋರಾಟ ಸಮಿತಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ಸರಸ್ವತಿ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಪರಮೇಶ್, ಬಲ್ಲಹಳ್ಳಿ ನಾರಾಯಣಸ್ವಾಮಿ, ಎಲ್. ರಾಮಕೃಷ್ಣಪ್ಪ, ಮುಳಬಾಗಿಲು ಸುಬ್ರಮಣಿ, ನಂಜುಂಡೇಗೌಡ, ಕೋಡಿರಾಮಸಂದ್ರ ಮುನಿಸ್ವಾಮಿ, ತಿರುಮಲಹಟ್ಟಿ ದೇವರಾಜ್, ಹೂವಳ್ಳಿ ಚಂದ್ರಶೇಖರ್, ಹರೀಶ್, ಬೈರನಹಳ್ಳಿ ಆನಂದ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.