ಕುರುಗೋಡು ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಕೋರೋನಾ ವಾರಿಯರ್ಸ್‍ಗೆ ಪಲಹಾರವಿತರಣೆ

ಕುರುಗೋಡು, ಜೂ.01: ಪಟ್ಟಣದ 23 ವಾರ್ಡುಗಳಲ್ಲಿ ಕಾರ್ಯನಿರ್ವಹಿಸುವ ಕೋರೋನಾ ವಾರಿಯರ್ಸ್ ಆಗಿ ಕೆಲಸಮಾಡಿದ ಅಂಗನವಾಡಿಕಾರ್ಯಕರ್ತೆಯರು, ಸಹಾಯಕರು, ಮತ್ತು ಆಶಾಕಾರ್ಯಕರ್ತೆಯರಿಗೆ ಕುರುಗೋಡು ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಉಚಿತವಾಗಿ ಫಲಹಾರಗಳನ್ನು ಸೋಮವಾರ ವಿತರಣೆಮಾಡಿದರು.
ಕುರುಗೋಡು ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಮುಖ್ಯಸ್ಥ ಎಂ.ಬಸವರಾಜ ಮಾತನಾಡಿ, ಕುರುಗೋಡು ಪುರಸಭೆಯ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಲ್ಲಿನ ಅಂಗನವಾಡಿ, ಆಶಾಕಾರ್ಯಕರ್ತೆಯರು ನಿಶ್ವಾರ್ಥವಾಗಿ ಸೇವೆ ಮಾಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅವರ ಕೊಡುಗೆ ಸಹ ಅಪಾರವಾಗಿದೆ. ಆದ್ದರಿಂದ ಅವರ ಸೇವೆಯನ್ನು ಗುರುತಿಸಿ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ವಿವಿದ ಹಣ್ಣು-ಹಂಪಲಗಳನ್ನು ನೀಡಿ ಗೌರವಿಸಿದ್ದೇವೆ ಎಂದು ನುಡಿದರು. ಮುಂದಿನದಿನಗಳಲ್ಲಿ ಅವರು ಇನ್ನು ಉತ್ತಮ ರೀತಿಯಲ್ಲಿ ಕೊರೋನಾ ನಿಯಂತ್ರಣ ಕಾರ್ಯದಲ್ಲ ತೊಡಗಿಸಿಕೊಂಡು ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕುರುಗೋಡು ಹೆಲ್ಪಿಂಗ್ ಹ್ಯಾಂಡ್ಸ್ ಯೂನಿಯನ್‍ನ ವಿ.ಪೊಂಪಾಪತಿ,ಶೇಕ್ಷಾವಲಿ, ಗಿರೀಶ, ಗುತ್ತಿರಾಜ್, ಮಣಿ, ರಾಮಾಂಜಿನಿ, ಶಿವುಶಂಕರ್, ಜಿಪಿ.ಮಲ್ಲಿಕಾರ್ಜುನ ಸೇರಿದಂತೆ ಇತರೆ ಮುಖಂಡರು ಇದ್ದರು.