ಕುರುಗೋಡು ಹಾವಿಗೆ ಮಠದ ಶ್ರೀಗಳು ಧೈವಾಧೀನ

ಬಳ್ಳಾರಿ ಮೇ 14 : ಜಿಲ್ಲೆಯಕುರುಗೋಡು ಪಟ್ಟಣದ ಹಾವಿಗೆ ಮಠದ ಸ್ಥಿರಪೀಠಾಧಿಶ್ವರರಾಗಿದ್ದ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಈ ದಿನ ಬೆಳಿಗ್ಗೆ 4:05 ಘಂಟೆಗೆ ಅನಾರೋಗ್ಯದಿಂದ ಬಳ್ಳಾರಿ‌ನಗರದಲ್ಲಿ ಶಿವಾಧೀನರಾಗಿದ್ದಾರೆ.
ಶ್ರೀಗಳ ಅಂತ್ಯಸಂಸ್ಕಾರವನ್ನು ಕುರುಗೋಡಿನ ರಾಘವಾಂಕ ಸ್ವಾಮಿ ಮಠದಲ್ಲಿ ಇಂದು‌ವಮಧ್ಯಾಹ್ನ ನೇರವೇರಿಸಲಾಯಿತು.
ಸಂತಾಪ:
ಶ್ರೀಗಳ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದು. ಶ್ರೀಗಳ‌ ನಿಧನದ ದುಖಃವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ ನೀಡುವಂತೆ ದೇವರಲ್ಲಿ ಕೋರಿದ್ದಾರೆ.