ಕುರುಗೋಡು- ಸಿಂದಿಗೇರಿರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಸಂಜೆವಾಣಿ ವಾರ್ತೆ
ಕುರುಗೋಡು.ನ.4: ಪಟ್ಟಣದ ಸಿಂದಿಗೇರಿರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಡಿ, 2021-21ನೇ ಸಾಲಿನ ಕಲ್ಯಾಣ-ಕರ್ನಾಟಕ ಅಭಿವೃದ್ದಿಯೋಜನೆಯ 1 ಕೋಟಿ ವೆಚ್ಚದಿಂದ ನಿರ್ಮಾಣವಾಗುವ ಕುರುಗೋಡು-ಸಿಂದಿಗೇರಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಕಂಪ್ಲಿ ಶಾಸಕರು ಮಾತನಾಡಿ, ಕುರುಗೋಡು ಭಾಗದ ಜನತೆಗೆ ಆಸ್ಪತ್ರೆಯ ಚಿಕಿತ್ಸೆಯು ಸಕಾಲಕ್ಕೆ ಕಷ್ಟಕರವಾಗಿದೆ. ಆದ್ದರಿಂದ ಕುರುಗೋಡು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುರುಗೋಡು ಪಟ್ಟಣದಲ್ಲಿ ಶೀಘ್ರದಲ್ಲೆ 100 ಹಾಸಿಗೆಯ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ಕುರುಗೋಡು-ಕೋಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬಂಗಿಮಲ್ಲಯ್ಯ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಡಿ.ಮಹೇಶ, ಗುತ್ತಿಗೆದಾರ ಮಸೀದಿಪುರಸಿದ್ರಾಮನಗೌಡ ಸೇರಿದಂತೆ ಕುರುಗೋಡು, ಸಿಂದಿಗೇರಿ, ಬೈಲೂರು, ಬಾದನಹಟ್ಟಿ, ಮುಷ್ಟಗಟ್ಟೆ, ಗೆಣಿಕೆಹಾಳು ಸೇರಿದಂತೆ ಇತರೆ ಕಂಪ್ಲಿಕ್ಷೇತ್ರದ ವಿವಿದ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು, ಊರಿನ ಮುಖಂಡರು ಇದ್ದರು.