ಕುರುಗೋಡು ಶುದ್ದಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಅವ್ಯವಹಾರ ; ಆರೋಪ

ಕುರುಗೋಡು. ಮಾ.31 ಪಟ್ಟಣದ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆ ಅಡಿ ಎಂಟು [ಆರ್‍ಓ] ಕುಡಿಯುವ ನೀರಿನ ಘಟಕ ನಿರ್ಮಾಣವಾದಲ್ಲಿ ಅವ್ಯವಹಾರ ನಡೆದಿದೆ ಎಂದು ಕುರುಗೋಡು ಪುರಸಭೆಯ 1ನೇ ವಾರ್ಡ್ ಸದಸ್ಯ ಜೆ.ಮಹೇಶ್ ಆರೋಪಿಸಿದರು.
ಪಟ್ಟಣದ ಪದ್ಮಶ್ರೀ ಲಾಡ್ಜ್‍ನಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುರಸಬೆ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂಪಾಯಿ ಗಳಷ್ಟು 8 ಘಟಕಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗಿದೆ, ಆದರೇ 5 ವರ್ಷ ಕಳೆದರೂ ಜನರು ಮಾತ್ರ ಅವುಗಳಿಂದ ಒಂದುಹನಿ ನೀರುಸಹ ಕುಡಿದಿಲ್ಲ ಎಂದು ವ್ಯಂಗ್ಯವಾಡಿದರು. ಈ ವಿಚಾರವಾಗಿ ಯೋಜನಾಧಿಕಾರಿ ರಮೇಶ್ ಕುಮಾರ್ ಅವರೊಂದಿಗೆ ಹಾಗೂ ಮುಖ್ಯಾಧಿಕಾರಿ ಪರಶುರಾಮ ಜತೆಗೆ ಫೋನ್‍ನಲ್ಲಿ ಕಾನ್ಫರೆನ್ಸ್ ಕಾಲ್‍ನಲ್ಲಿ ಮಾತನಾಡಿರುವ ಬಗ್ಗೆ ಕೆಲವು ವಾಟ್ಸ್‍ಆಪ್ ಗ್ರೂಪ್‍ಗಳಿಗೆ ಅಧಿಕಾರಿಗಳ ಭ್ರಷ್ಟಾಚಾರದ ನಡೆದಿದೆ ಎಂದು ಆರೋಪಿಸಿ ಧ್ವನಿ ಸುರುಳಿ ಪೋಸ್ಟ್ ಮಾಡಿದ್ದೇನೆ. ಈ ಕುರಿತು ನನಗೆ ಸೂಚನಾ ಪತ್ರ ನೀಡಿತ್ತಾರೆ. ಅಧಿಕಾರಿಗಳ ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರಕ್ಕೆ ಸಾಥ್ ನೀಡಿಲ್ಲವೆಂದು ನನಗೆ ನೋಟೀಸ್ ಜಾರಿ ಮಾಡಿದ್ದಾರೆ. ಇದು ನ್ಯಾಯವೇ ಎಂದರು.
ಪುರಸಭೆಯ ಸದಸ್ಯನಾದ ನನ್ನ ಪರಿಸ್ಥಿತಿ ಹೀಗಿರುವಾಗ ಜನ ಸಾಮನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.? ನಾನು ಆರ್‍ಓ ಘಟಕಗಳ ಬಗ್ಗೆ ಮಾಹಿತಿ ನೀಡಬೇಕೆಂದು ಮಾ.9 ರಂದು ಪತ್ರ ¨ರೆದರೂ ಈ ವರೆಗೂ ಯಾವೂದೇ ಮಾಹಿತಿ ನೀಡಿರುವುದಿಲ್ಲ. ಪುರಸಭೆಗೆ ಎನ್‍ಎ ಪ್ಲಾಟ್‍ಗಳ ಅನುಮೋದನೆ, ನೀರಿನ ಕರ ವಸೂಲಿ, ಮನೆಗಳ ಕರ ವಸೂಲಿ, ಕಟ್ಟಡ ಪರವಾನಿಗೆ, ಟ್ರೇಡ್ ಲೈಸೆನ್ಸ್ ಹಾಗೂ ಇನ್ನಿತರ ಮೂಲಗಳಿಂದ ಪ್ರತಿ ವರ್ಷ ರೂಪಾಯಿ 2 ಕೋಟಿಗೂ ಅಧಿಕ ಆದಾಯ ಬರುತ್ತಿದೆ. 2015 ರಿಂದ ಲೆಕ್ಕ ಪತ್ರಗಳ ಆಡಿಟಿಂಗ್ ನಡೆದಿಲ್ಲ ಎಂದು ದೂರಿದರು. ಮುಖಂಡ ಎಂ.ರುದ್ರಪ್ಪ ಮಾತನಾಡಿ, ಗೆಣಿಕೆಹಾಳು ರಸ್ತೆ ಕಾಮಗಾರಿಯು ಕಳೆದ 3 ರ್ಷಗಳಿಂದ ಸಂಪೂರ್ಣ ಕಾಮಗಾರಿ ನಡೆಯುತ್ತಿಲ್ಲ. ಆನಸಾಮಾನ್ಯರಿಗೆ ಬಳ ತೊಂದರೆಯಾಗಿದ. ಇಂದಿನಿಂದಾದರೂ ಪುರಸಭೆಯ ಅಧಿಕಾರಿಗಳು ಪಟ್ಟಣದ ಸಮಗ್ರ ಅಭಿವ್ರುದ್ದಿಗೆ ಶ್ರಮಿಸಬೇಕೆಮದು ನುಡಿದರು. ಮುಖಂಡರಾದ ಕರೆಪ್ಪನವರ ಬಸವರಾಜ್ ಇದ್ದರು.