ಕುರುಗೋಡು ಭಾಗಕ್ಕೆ ರೈಲ್ವೆ ಮಾರ್ಗ ವಿಸ್ತರಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.09: ಜಿಲ್ಲೆಯ ಕುರುಗೋಡು- ಎಮ್ಮಿಗನೂರು ಭಾಗಕ್ಕೆ ರೈಲ್ವೆ ಮಾರ್ಗವನ್ನು ವಿಸ್ತರಿಸಬೇಕೆಂದು ಎಮ್ಮಿಗನೂರು ಗ್ರಾಮದ ಹಂಪಿ ಚಂದ್ರಶೇಖರ್ ನೇತೃವದಲ್ಲಿ ಕೊಪ್ಪಳ. ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಅವರಿಗೆ ಮನವಿ ಮಾಡಿದೆ.
ಈ ಹಿಂದೆ ಗಂಗಾವತಿ, ಕಂಪ್ಲಿ, ದರೋಜಿ ಮಾರ್ಗದ ಗ್ರಾಮಗಳು ಈಗಾಗಲೇ 5 ರಿಂದ 10 ಕಿ.ಮೀ.ಗಳ ವ್ಯಾಪ್ತಿಯಲ್ಲಿ ರೈಲು ನಿಲ್ದಾಣ ಇರುವುದರಿಂದ ಹಾಗೂ ಕಡಿಮೆ ಗ್ರಾಮಗಳು ಇರುವುದರಿಂದ ಮಾರ್ಗ ಬದಲಾಯಿಸಿ ಗಂಗಾವತಿ, ಕಂಪ್ಲಿ, ಎಮ್ಮಿಗನೂರು, ಕುರುಗೋಡು ಬಾದನಹಟ್ಟಿ  ಸಿರುಗುಪ್ಪಗೆ ರೈಲ್ವೇ  ಮಾರ್ಗ ಕಲ್ಪಿಸಬೇಕು.
ಐತಿಹಾಸಿಕ ಕ್ಷೇತ್ರ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನ ಇರುವುದರಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕುರುಗೋಡಿಗೆ ಬರುವ ಭಕ್ತಾದಿಗಳು  ಅನುಕೂಲವಾಗುತ್ತದೆ. ಅಲ್ಲದೇ ಕಂಪ್ಲಿ ಭಾಗದ ಎಮ್ಮಿಗನೂರಿನ ಜಡಿಸಿದ್ದೇಶ್ವರ ಶಿವಯೋಗಿಗಳು ಹಾಗೂ ಹಂಪಿ ಸಾವಿರ ದೇವರ ಮಠ  ಇದೆ. ಸದ್ಯ ಸರ್ವೇವ್ಯಾಪ್ತಿ ಕಂಪ್ಲಿ ಒಂದೇ ತಾಲೂಕಿಗೆ ಅನುಕೂಲವಾಗುತ್ತಿದೆ. ಅದರ ಬದಲಾಗಿ ಕುರುಗೋಡಿಗೂ ವಿಸ್ತರಣೆ  ಮಾಡಿ ಎಂದು ಮನವಿ ಮಾಡಿದ್ದಾರೆ.

One attachment • Scanned by Gmail