ಕುರುಗೋಡು ಪೋಲೀಸರಿಂದ ಎಟಿಎಂ ದರೋಡೆಕೋರರ ಬಂದನ

ಕುರುಗೋಡು.ಏ.23 ಎಟಿಎಂ ಟೆಕ್ನಿಷಿಯನ್ ತನ್ನ ಇಬ್ಬರು ಸಹಚರದೊಂದಿಗೆ ನೆಲ್ಲುಡಿಕೊಟ್ಟಾಲ್‍ನಲ್ಲಿದ್ದ ಎಸ್‍ಬಿಐ ಎಟಿಎಂ ನಲ್ಲಿರುವ ರೂ. 9.36ಲಕ್ಷ ಹಣವನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಳ್ಳಾರಿಯ ಶ್ರೀರಾಂಪುರಕಾಲೋನಿಯಲ್ಲಿ ಬಂದಿಸುವಲ್ಲಿ ಕುರುಗೋಡು ಪೋಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿಯ ಎಟಿಎಂ ಟೆಕ್ನಿಷಿಯನ್ ಲೋಕೇಶ್ [30], ಕೆ.ವೀರೇಶ [27], ಮತ್ತು ಡಿ.ಶ್ರೀನಿವಾಸ[38] ಎಂದು ತಿಳಿದುಬಂದಿದೆ. ಎಟಿಎಂ ಒಡೆಯದೇ ಗುಪ್ತಸಂಖ್ಯೆಯನ್ನು ಉಪಯೋಗಿಸಿ ಎಟಿಎಂನಲ್ಲಿದ್ದ ರೂ.9.36ಲಕ್ಷ ಕಳ್ಳನತವಾಗಿದೆ ಎಂದು ಮೇ.4 ರಂದು ಮ್ಯಾನೇಜರ್ ಪೋಲೀಸ್‍ಠಾಣೆ ದೂರು ನೀಡಿದ್ದರು.
ಇದರ ಅನ್ವಯ ಜಿಲ್ಲಾ ಎಸ್‍ಪಿ, ಎಎಸ್‍ಪಿ, ಮತ್ತು ಡಿಎಸ್‍ಪಿ ಮಾರ್ಗದರ್ಶನದಲ್ಲಿ ಕುರುಗೋಡು ಸಿಪಿಐ ಚಂದನ್‍ಗೋಪಾಲ್ ರವರ ತಂಡ ಮಿಂಚಿನಕಾರ್ಯಾಚರಣೆ ನಡೆಸಿ, ರೂ. 8.26ಲಕ್ಷ ಮತ್ತು ಸುಜುಕಿ ಮೋಟಾರ್‍ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಬಳ್ಳಾರಿ ಗ್ರಾಮೀಣವಿಭಾಗದ ಡಿವೈಎಸ್‍ಪಿ ಎಂಜಿ. ಸತ್ಯನಾರಾಯಣ ರವರು ತಿಳಿಸಿದ್ದಾರೆ.
ದಾಳಿಯಲ್ಲಿ ಕುರುಗೋಡು ಸಿಪಿಐ ಚಂದನ್‍ಗೋಪಾಲ್, ಪಿಎಸ್‍ಐ.ಮೌನೇಶರಾಥೋಡ್, ಸಿಬ್ಬಂದಿಯವರಾದ ಮಹೇಶ, ರವಿಚಂದ್ರ,ಶ್ರೀನಿವಾಸ, ದೇವೇಂದ್ರ, ನಾಗಿರೆಡ್ಡಿ, ಹಾಗು ನಾಗರಾಜ, ಅನ್ವರ್ ರವರು ದಾಳಿಯಲ್ಲಿದ್ದರು. ದರೋಡೆಗಳಲ್ಲಿ ನೆಲ್ಲುಡಿಕೊಟ್ಟಾಲ್ ಎಟಿಎಂ ಕಳ್ಳತನ ರಾಜ್ಯದಲ್ಲಿ ಪ್ರಥಮವಾಗಿದೆ. ಇಂಥಹ ಸೂಕ್ಷ ಕೇಸನ್ನು ತನಿಖೆಮಾಡಿದ ಕುರುಗೋಡು ಸಿಪಿಐ ಚಂದನ್‍ಗೋಪಾಲ್ ರವರ ಕಾರ್ಯವೈಖರಿಗೆ ಜಿಲ್ಲಾ ಎಸ್‍ಪಿ ಸೈದುಲ್‍ಅದಾವತ್ ಮೆಚ್ಚುಗೆವ್ಯಕ್ತಪಡಿಸಿ, ಬಹುಮಾನ ಘೋಸಿಸಿದ್ದಾರೆ.