ಕುರುಗೋಡು ಪುರಸಭೆ ಮುಖ್ಯಾದಿಕಾರಿಯಾಗಿ ಪರುಶುರಾಮ ಅದಿಕಾರಸ್ವೀಕಾರ

ಕುರುಗೋಡು.ನ22 : ಪಟ್ಟಣದ ಮುಖ್ಯಾಧಿಕಾರಿ ಹೆಚ್. ಪಿರೋಜ್‍ಖಾನ್‍ರವರು ವರ್ಗಾವಣೆಯಾದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಪ್ರಸ್ತುತವಾಗಿ ಪುರುಶುರಾಮರವರು ನೂತನ ಮುಖ್ಯಾಧಿಕಾರಿಯಾಗಿ ಶನಿವಾರ ಅಧಿಕಾರಸ್ವೀಕರಿಸಿದರು.
ಪ್ರಾರಂಭದಲ್ಲಿ ಪದ್ದತಿಯಂತೆ ಈ ಹಿಂದೆ ಕಾರ್ಯನಿರ್ವಹಿಸಿದ ಮುಖ್ಯಾಧಿಖಾರಿ ಹೆಚ್.ಪಿರೋಜ್‍ಖಾನ್‍ರವರು, ಪುರುಶುರಾಮರವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮುಖ್ಯಾಧಿಕಾರಿ ಪುರುಶುರಾಮರವರು ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಚತೆ, ಕುಡಿಯುವನೀರು, ಕಸವೀಲೇವಾರಿ ಸೇರಿದಂತೆ ಇತರೆ ಸೌಕರ್ಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮ್ಯಾನೇಜರ ಭಾಸ್ಕರ, ಕಂದಾಯಅದಿಕಾರಿ ಮಹೆಬೂಬ್‍ಪಾಷಾ, ಸಂಘಟನಾ ಅಧಿಕಾರಿ ಬಸವರಾಜ, ಸ್ವರ್ಣಲತ, ರಾಜೇಶ್ ಸೇರಿದಂತೆ ಇತರೆ ಸಿಬ್ಬಂದಿವರ್ಗ, ಹಾಗು ಊರಿನ ಮುಖಂಡರು ನೂತನ ಮುಖ್ಯಾಧಿಕಾರಿ ಪುರುಶುರಾಮರವರಿಗೆ ಹೂಗುಚ್ಚನೀಡಿ ಸ್ವಾಗತಿಸಿದರು.