ಕುರುಗೋಡು ದೊಡ್ಡಬಸವೇಶ್ವರ ದರ್ಶನಕ್ಕೂ ನಿರ್ಬಂಧ

ಬಳ್ಳಾರಿ ಮಾ 27 : ಜಿಲ್ಲೆಯಕುರುಗೋಡು ಪಟ್ಟಣದ ಐತಿಹಾಸಿಕ‌ ಶ್ರೀ. ದೊಡ್ಡಬಸವೇಶ್ವರ ರಥೋತ್ಸವ ನಾಳೆ ನಡೆಯಬೇಕಿತ್ತು ಅದನ್ನು ನಿಷೇಧ ಮಾಡಿದೆ. ಜೊತೆಗೆ ಭಕ್ತಾದಿಗಳ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದೆ.

ಸಾರ್ವನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನೋವೆಲ್ ಕೊರೋನಾ ವೈರಾಣು ಹೆಚ್ಚಾಗಿ ಹರಡದಂತೆ ತಡೆಯುವ ಉದ್ದೇಶದಿಂದ ನಾಳೆ(ಮಾ.28)ನಡೆಯಬೇಕಿದ್ದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ರಥೋತ್ಸವವನ್ನು ನಿಷೇಧಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್ ಅವರು ತಿಳಿಸಿದ್ದಾರೆ.

ರಥೋತ್ಸವದ ನಿಷೇಧದ ಜೊತೆಗೆ ಭಕ್ತಾದಿಗಳ ದೇವರ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ.

ಸರಕಾರದ ಮುಖ್ಯ ಕಾರ್ಯದರ್ಶಿಗಳು ಶನಿವಾರ ಹೊರಡಿಸಿದ ಆದೇಶದ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.