ಕುರುಗೋಡು ತಾ.ಪಂ. ಇ.ಒ ಕರ್ತವ್ಯಕ್ಕೆ ಹಾಜರು

ಕುರುಗೋಡು.ಡಿ.03: ಕುರುಗೋಡು ತಾಲೂಕುಪಂಚಾಯಿತಿ ಕಾರ್ಯನಿರ್ವಾಹಕ [ಇಒ] ಅಧಿಕಾರಿಯಾಗಿ ಕೆವಿ. ನಿರ್ಮಲ ರವರು ನಿನ್ನೆ ಕರ್ತವ್ಯಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ತಾ.ಪಂ. ಕಛೇರಿಯ ಅಧಿಕಾರಿಗಳು, ಹಾಗು ಪಿಡಿಒ ಮತ್ತು ಸಿಬ್ಬಂದಿವರ್ಗದವರು ಆತ್ಮೀಯವಾಗಿ ಹೂಮಾಲೆ ಹಾಕಿ ಸ್ವಾಗತಿಸಿದರು.
ಕುರುಗೋಡು ತಾ.ಪಂ. ನರೇಗಾ ಸಹಾಯಕ ನಿರ್ದೆಶಕ ಶಿವರಾಮರೆಡ್ಡಿ, ಯೋಜನಾಧಿಕಾರಿ ರಮೇಶ, ವ್ಯವಸ್ಥಾಪಕ ಅನಿಲ್‍ಕುಮಾರ್, ಕುರುಗೋಡು ತಾಲೂಕಿನ ಎಲ್ಲಾ ಪಿಡಿಒಗಳು ಮತ್ತು ತಾ.ಪಂ. ಕಛೇರಿಯ ಸಹಾಯಕರು, ಸಿಬ್ಬಂದಿವರ್ಗದವರು ಇದ್ದರು.