ಕುರುಗೋಡು ತಾಲೂಕು ಕುರುಬರ ಸಂಘಕ್ಕೆ ಅಧ್ಯಕ್ಷರಾಗಿ ಜೆ.ಎಸ್.ದೊಡ್ಡಬಸಪ್ಪ ಆಯ್ಕೆ

ಬಳ್ಳಾರಿ, ಏ.2: ಜಿಲ್ಲೆಯ ಕುರುಗೋಡು ತಾಲೂಕಿನ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್.ದೊಡ್ಡಬಸವ ಅವರನ್ನು ನಿನ್ನೆ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ.
ಸಂಘದಲ್ಲಿ ಈ ವರೆಗೆ ಅಧ್ಯಕ್ಷರಾಗಿ ಚಾನಾಳ್ ಚೆನ್ನಬಸವರಾಜ್ ಇದ್ದರು. ಅವರ ಕಾರ್ಯವೈಖರಿಯನ್ನು ವಿರೋಧಿಸಿ ನಿನ್ನೆ ಸರ್ವಸದಸ್ಯರ ಸಭೆ ನಡೆಸಿ ಸರ್ವಾನುಮತದಿಂದ ದೊಡ್ಡಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು ಬಳ್ಳಾರಿಗೆ ಆಗಮಿಸಿದ್ದ ದೊಡ್ಡಬಸಪ್ಪ ಅವರಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕರು ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಿಗೆ ಶುಭ ಕೋರಿದ ದಮ್ಮೂರು ಶೇಖರ್ ಅವರು ಸಮುದಾಯದ ಸಂಘಟನೆಯನ್ನು ಬಲಿಷ್ಟಗೊಳಿಸಲು ಸಮುದಾಯದ ಜನತೆಗೆ ಸಮಸ್ಯೆಗಳು ಬಂದಾಗ ಅವನ್ನು ಪರಿಹರಿಸಲು ಶ್ರಮಿಸುವುದು, ಹೋರಾಟ ಮಾಡಲು ಮುಂದಾಗಲು ಕೋರಿ ಶುಭ ಹಾರೈಸಿದರು.