ಕುರುಗೋಡು ತಾಲೂಕು ಕುರುಬರ ಸಂಘದ ಅಧ್ಯಕ್ಷರ ಬದಲಾವಣೆ ಅಗಿಲ್ಲ: ಚನ್ನಬಸವರಾಜ್

ಬಳ್ಳಾರಿ, ಏ.04: ಜಿಲ್ಲೆಯ ಕುರುಗೋಡು ತಾಲೂಕು ಕುರುಬರ ಸಂಘಕ್ಕೆ ನಾನು ಹಾಲಿ ಅಧ್ಯಕ್ಷನಾಗಿದ್ದು. ಕೆಲ ಕಿಡಿಗೇಡಿಗಳು ನಕಲಿ ಲೆಟರ್ ಹೆಡ್ ಬಳಸಿ ಅಧ್ಯಕ್ಷರ ಬದಲಾವಣೆ ಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಕೆಲ ಪಕ್ರಿಕೆಗಳಿಗೆ ಈ ವಿಷಯ ನೀಡಿ ಮಾಧ್ಯಮದ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಹೀಗಾಗಿ ಕುರುಗೋಡು ತಾಲೂಕು ಕುರುಬರ ಸಂಘದ ಅಧ್ಯಕ್ಷರ ಬದಲಾವಣೆ ಅಗಿಲ್ಲ ಎಂದು ಚನ್ನಬಸವರಾಜ್ ಗೌಡ ಪತ್ರಿಕಾ ಹೇಳಿಕೆಯಲ್ಲಿ ನೀಡಿದ್ದಾರೆ.
ತಾಲೂಕು ಸಂಘದ ಎಲ್ಲ ಪದಾಧಿಕಾರಿಗಳು ನನ್ನ ಜೊತೆ ಇದ್ದು. ಹಾಲಿ ಅಧ್ಯಕ್ಷನಾಗಿ ನಾನೇ ಮುಂದುವರೆದಿದ್ದೇನೆ ಎಂದು ಅವರು ಹೇಳಿದ್ದಾರೆ.