ಕುರುಗೋಡು ತಾಲೂಕಿನಲ್ಲಿ ಉತ್ತಮಮಳೆ
ಸೂರ್ಯಕಾಂತಿ ಬೆಳೆಗೆ ಕೃಷಿ ಅಧಿಕಾರಿಗಳ ತಂಡ ಭೇಟಿ


ಕುರುಗೋಡು.ಆ.2  ಕುರುಗೋಡು ತಾಲೂಕಿನ ವಿವಿದ ಗ್ರಾಮಗಳಲ್ಲಿ ಕಳೆದ 3,4 ದಿನಗಳಿಂದ ಧಾರಾಕಾರವಾಗಿ ಸುರಿದ 138 ಮೀಮೀ. ಉತ್ತಮಮಳೆಯಾಗಿದ್ದು, ಈ ಹಿನ್ನಲೆಯಲ್ಲಿ ಕುರುಗೋಡು ಕೃಷಿ ಹಿರಿಯ ಅಧಿಕಾರಿ ಎಂ.ದೇವರಾಜ್ ಹಾಗು ಕೃಷಿ ವಿಜ್ಣಾನಿ  ಡಾ. ಕೃಷ್ಬಮೂರ್ತಿ ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ರೈತ ಎನ್. ಯಂಕಣ್ಣ, ಹಾಗು ಎನ್.ದಿವಾಕರ ರವರು ಬೆಳೆದ ಸೂರ್ಯಕಾಂತಿ ಬೆಳೆಗೆ ಬೇಟಿ ನೀಡಿದ ಕೃಷಿವಿಜ್ಣಾನಿ ಡಾ.ಕೃಷ್ಣಮೂರ್ತಿಯವರು ಮಾತನಾಡಿ, ಕುರುಗೋಡು ತಾಲೂಕಿನಲ್ಲಿ ಸತತ 4 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ರೈತರ ಜಮೀನುಗಳ ತೇವಾಂಶ ಹೆಚ್ಚಾಗಿ ಗಿಡಗಳು ಬಾಡಿಹೋಗುತ್ತಿವೆ. ಆದ್ದರಿಂದ ಮಳೆ ಪ್ರಮಾಣ ಹೆಚ್ಚಾದಾಗ ರೈತರು ಜಮೀನುನಲ್ಲಿನ ನೀರನ್ನು ಹೊಗತೆಗೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು. ಜೊತೆಗೆ  1 ಲೀಟರ್ ನೀರಿಗೆ 4 ಎಂಎಲ್ ನ್ಯಾನೋಈರಿಯಾವನ್ನು ಸಿಂಪಡಿಸುವುದು ಉತ್ತಮವಾಗಿದೆ ಎಂದರು.
ಕುರುಗೋಡು ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ್ ಮಾತನಾಡಿ, ಮಳೆಯ ತೇವಾಂಶ ಹೆಚ್ಚಾದಂತೆಲ್ಲಾ ರೈತರು ಸೂಡೋಮೋನೋಜ್ ಔಷದಿಯನ್ನು ಸಿಂಪಡಿಸುವುದರಿಂದ ಗಿಡದ ಬೇರಿನಲ್ಲಿನ ಸಣ್ಣರೋಗಗಳು ನಾಶವಾಗುತ್ತಿವೆ ಎಂದರು. ಮಳೆಯಲ್ಲಿನ ಎಲೆಗೆ ಫಂಗಸ್ ರೀತಿಯ ರೋಗವು ಕಾಣಸಿಕೊಂಡಾಗ ಇದಕ್ಕೆ ಕಾರ್ಭೋಂಡೈಜಮ್ ಔಷದಿಯನ್ನು ಸಿಂಪಡಿಸಬೇಕು. ಅಲ್ಲದೆ ಹತ್ತಿಬೆಳೆಗೆ ಮಳೆಯು ಹೆಚ್ಚಾಗುವುದರಿಂದ ಎಲೆಕೆಂಪಾಗುತ್ತಿದೆ, ರೈತರು ಯಾವುದೇ ರೀತಿಯ ಭಯಪಡಬಾರದು, ಇದಕ್ಕೆ ಮ್ಯಾಗ್ನೀಷಿಯಂ ಸಲ್‍ಫೈಟ್ ಔಷದಿಯನ್ನು ಸಿಂಪಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಸಣ್ಣಗಾದಿಲಿಂಗಪ್ಪ, ಅಗಸರಬಸವರಾಜ, ಗೊಲ್ಲರಪೊಂಪಾಪತಿ, ಗಾದಿಲಿಂಗಪ್ಪ ಸೇರಿದಂತೆ ಇತರೆ ಕಲ್ಲುಕಂಬ ಗ್ರಾಮದ ರೈತರು ಇದ್ದರು.