ಕುರುಗೋಡು ತಾಲೂಕಿನಲ್ಲಿಕೆ ಆರ್ ಪಿ  ಪಕ್ಷದ  ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ  ಕುರುಗೋಡಿನಲ್ಲಿ ಇಂದು  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಘಟನಾತ್ಮಕ ಸಭೆ ನಡೆಯಿತು
ಕ ಪಕ್ಷದ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಪಕ್ಷದ ಜಿಲ್ಲಾ ಅಧ್ಯಕ್ಷ  ದಮ್ಮರು ಶೇಖರ್,  ಪಕ್ಷದ ಸಂಘಟನೆ ನನ್ನ ತವರು ಕ್ಷೇತ್ರ ಕಂಪ್ಲಿಯಿಂದ ಪ್ರಾರಂಭಿಸಿದ್ದು.  ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆಂದರು.
ಕುರುಗೋಡು ತಾಲೂಕಿನ ಪರಿಶಿಷ್ಟ ವರ್ಗ ಶಕ್ತಿ ಘಟಕದ ಅಧ್ಯಕ್ಷರಾಗಿ ರಾಜಶೇಖರ, ಓಬಿಸಿ ಶಕ್ತಿ ಘಟಕದ ಅಧ್ಯಕ್ಷರಾಗಿ  ನೇಕಾರ ಗಿರೀಶ್ ಅವರನ್ನು ನೇಮಕ ಮಾಡಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಆಚಾರ್, ಉಪಾಧ್ಯಕ್ಷ ಪ್ರಭುಶೇಖರ್ ಗೌಡ, ಮಹಿಳಾ ಶಕ್ತಿ ಘಟಕದ  ಜಿಲ್ಲಾ ಖಜಾಂಚಿ ಸತೀಶ್ ,  ಶ್ರೀನಿವಾಸ ಶೆಟ್ಟಿ,  ವೀರಶೇಖರ್ ರೆಡ್ದಿ  ಭಾಗವಹಿಸಿದ್ದರು.