ಕುರುಗೋಡು ಜಾತ್ರೆ ಎರೆಡು ದಿನ ಮಹಾ ದಾಸೋಹ(

ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.24: ಜಿಲ್ಲೆಯ ಐತಿಹಾಸಿಕ ಕುರುಗೋಡು ಪಟ್ಟದಲ್ಲಿ ನಾಳೆ ದೊಡ್ಡಬಸವೇಶ್ವರ ರಥೋತ್ಸವ ನಡೆಯಲಿದೆ. ಇಲ್ಲಿಗೆ ಬರುವ ಭಕ್ತರಿಗೆ ನಾಳೆ ಮತ್ತು ನಾಡಿದ್ದು ಮಸೀದಿಪುರದ ಸಿದ್ದರಾಮನಗೌಡ ಮಹಾ ದಾಸೋಹವನ್ನು ಹಮ್ಮಿಕೊಂಡಿದ್ದಾರೆ.ಕುರುಗೋಡಿನ ಬಳ್ಳಾರಿ ರಸ್ತೆಯ ಕೊಟ್ಟೂರು ಸ್ವಾಮಿ ಮಠದ ಎದುರಿನಲ್ಲಿ ದಾಸೋಹದ ವ್ಯವಸ್ಥೆ ಮಾಡಿದ್ದು. ನಾಳೆ ಬೆಳಿಗ್ಗೆ 11 ಗಂಟೆಗೆ ಕೊಟ್ಟೂರು ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರಿಂದ ಪ್ರಸಾದ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.ಕುರುಗೋಡು ತಾಲೂಕು ರಚನೆಯಾದ ವರ್ಷದಿಂದ ಈ ಕಾರ್ಯವನ್ನು ಸಿದ್ದರಾಮನಗೌಡ ಅವರು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.