
ಸಂಜೆವಾಣಿ ವಾರ್ತೆ
ಕುರುಗೋಡು:ಏ.28: ಸಾರ್ವಜನಿಕರ ಆಸ್ತಿ ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸುಲಭಗೊಳಿಸಲು ಸರಕಾರ ಕಾವೇರಿ-2.0 ತಂತ್ರಾಂಶವನ್ನು ಪರಿಚಯಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಂ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಕಾವೇರಿ 2.0 ತಂತ್ರಾಂಶದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಆಸ್ತಿ ನೋಂದಣಿಗೆ ಸಾರ್ವಜನಿಕರು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ದಿನಗಳಗಟ್ಟಲೆ ಅಲೆದಾಡಬೇಕಾಗಿತ್ತು. ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಸಾರ್ವಜನಿಕರೇ ಆನ್‌ಲೈನ್ ಮೂಲಕ ಸುಲಭ ದಾಖಲೆಗಳನ್ನು ಕಳುಹಿಸಿಕೊಡಲಾಗುವುದು. ಇಲ್ಲಿವರೆಗೂ ದಾಸ್ತಾವೇಜನು ಮಾಡಲಾಗಿತ್ತು. ಆದರೆ, ಕಾವೇರಿ ತಂತ್ರಾಂಶವನ್ನು ಅನುಷ್ಠಾನಕ್ಕೆ ತರಲಾಗಿದೆ. ತರಬೇತಿಯೊಂದಿಗೆ ತಂತ್ರಾಂಶದಲ್ಲಿ ಯಾವ ರೀತಿಯಲ್ಲಿ ಜನರು ನೋಂದಣಿ ಮಾಡಬೇಕೆಂಬದನ್ನು ತಿಳಿದುಕೊಳ್ಳಬೇಕು ಎಂದರು.
ತಹಶೀಲ್ದಾರ್ ಗುರುರಾಜ್ ಎಂ.ಚಲುವಾದಿ ಮಾತನಾಡಿ, ಹೊಸ ತಂತ್ರಾಂಶದೊಂದಿಗೆ ಆಸ್ತಿ ನೋಂದಣಿಗೆ ಅನುಕೂಲ ಮಾಡಿಕೊಟ್ಟಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಾವೇರಿ 2.0 ತಂತ್ರಾಂಶದ ತರಬೇತಿದಾರ ರಘು ಅವರು ತಂತ್ರಾಂಶದ ಪ್ರೊಜೆಕ್ಟ್ ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿ ತೇಜಸ್ವಿ ಎಲ್.ನಾಯಕ, ಕಂಪ್ಯೂಟರ್ ಆಪರೇಟರ್ ಗಟ್ಟಿ ರಾಘವೇಂದ್ರ ಹಾಗೂ ಪತ್ರ ಬರಹಗಾರರು ಇದ್ದರು.