ಕುರುಗೋಡುನಲ್ಲಿ ಕಾಂಗ್ರೆಸ್ ಹಿಂದುಳಿದವರ್ಗ ವಿಭಾಗದ ಜಿಲ್ಲಾ ಕಛೇರಿ ಉದ್ಘಾಟನೆ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ,8: ಬೇರುಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ. ಕಂಪ್ಲಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭ್ಯರ್ಥಿ ಯನ್ನು ಹಾಕಲಿ ಅವರಿಗೆ ಶಕ್ತಿ ತುಂಬೋಣ. ಕಾಂಗ್ರೆಸ್ ಪಕ್ಷ ಹಾಗೂ ಇಲ್ಲಿನ ಪಕ್ಷದ ಅಭ್ಯರ್ಥಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ನಮ್ಮ ಜಿಲ್ಲೆಯ 10 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗದ ಜಿಲ್ಲಾಧ್ಯಕ್ಷ ಕೆ.ಮಲ್ಲಕಾರ್ಜುನ ಹೇಳಿದರು.
ಪಟ್ಟಣದ ಘಟ್ಟಿ ಕಾಂಪ್ಲೆಕ್ಸ್ ಮಳಿಗೆಯಲ್ಲಿ ಇಂದು ಬೆಳ್ಳಿಗ್ಗೆ ಕಾಂಗ್ರೆಸ್ ಹಿಂದುಳಿದವರ್ಗ ವಿಭಾಗದ ಜಿಲ್ಲಾ ಕಛೇರಿ ಇದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಹಿನ್ನಡೆ ಆಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸೇರಿ ಜಾತಿ ಭೇದವಿಲ್ಲದೆ ಸಮಾಜ ಒಗ್ಗೂಡಿಸಿ ಪಕ್ಷ ಸಂಘಟಿಸಲು ಮುಖಂಡರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೆ.ಎಂ.ಉಮಾಪತಿಗೌಡ, ಸಿ.ಯುವರಾಜ, ಕೆ.ಎನ್.ಮಂಜುನಾಥ ಶೆಟ್ಟಿ, ಪ್ರಚಾರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವೆಂಕಟೇಶಗೌಡ, ಕೋದಂಡರಾಮ ಸ್ಟೇಟ್ ಪ್ರೆಸ್ಡೆಂಟ್, ಕಾಳಿಂಗ ವರ್ಧನ, ಶ್ರೀಧರಗೌಡ, ಪ್ರಕಾಶಗೌಡ, ಎ.ಮಲ್ಲಿಕಾರ್ಜುನ, ಪರಶುರಾಮ, ಹಡಪದ ವಿರೇಶ ಸೇರಿದಂತೆ ಹಿಂದೂಳಿದ ವರ್ಗಗಳ ಬ್ಲಾಕ್ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.