ಕುರುಗೋಡು:ದೇವಸ್ಥಾನ ಹುಂಡಿ ಎಣಿಕೆ 9.73 ಲಕ್ಷ ಸಂಗ್ರಹ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.31: ಪಟ್ಟಣದ ಆರಾದ್ಯದೈವ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹಿಂದೂ-ಧಾರ್ಮಿಕ ದತ್ತಿ ಇಲಾಖೆ, ಬ್ಯಾಂಕ್ ಅಧಿಕಾರಿಗಳು ಮತ್ತು ಪೋಲೀಸ್ ಸಿಬ್ಬಂದಿ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಬುಧವಾರ ಹುಂಡಿ ಹಣ ಎಣಿಕೆ ಜರುಗಿತು.
ಬೆಳಿಗ್ಗೆಯಿಂದ ಹುಂಡಿ ಹಣ ಎಣಿಕೆ ಎಲ್ಲರ ಸಮಕ್ಷದಲ್ಲಿ ಆರಂಭವಾಗಿ ಸಂಜೆ ವೇಳೆಗೆ ಮುಕ್ತಾಯಗೊಂಡಿತು ಹುಂಡಿ ಹೆಣಿಕೆಯಲ್ಲಿ ರೂ 9,73,035 ಸಂಗ್ರಹವಾಗಿದೆ, ಇಲಾಖೆ ನಿರ್ದೇಶನದಂತೆ ದೇವಸ್ಥಾನದ ಅಭಿವದ್ಧಿಗೆ ಭಕ್ತರು ಸಂದಾಯಿಸಿದ ಹಣ ವಿನಿಯೋಗಿಸಲಾಗುವುದು ಎಂದು ಹಿಂದೂ ದಾರ್ಮಿಕ ದತ್ತಿ ಇಲಾಖೆಯ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ವಿ.ಹನುಮಂತಪ್ಪ ಎಲ್ಲರ ಸಮಕ್ಷಮದಲ್ಲಿ ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧಿಕಾರಿ ವಾಲ್ಮೀಕಿ ಪ್ರಕಾಶ್ , ಪೋಲೀಸ್ ಇಲಾಖೆಯ ಎ.ಎಸ್.ಐ ಕೆ.ಗುರುಸಿದ್ದನ ಗೌಡ , ಮುಖಂಡ ಚಾನಾಳು ಆನಂದ, ಕ.ರ.ವೇ ಬಳ್ಳಾರಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೃತ್ಯುಂಜಯ, ಕ.ರ.ವೇ ಕುರುಗೋಡು ತಾಲೂಕು ಗೌರವಧ್ಯಕ್ಷ ಹಂಪೆ ಬಸವರಾಜ, ಕುಂಬಾರು ಸಂಘದ ಕುರುಗೋಡು ತಾಲೂಕು ಅಧ್ಯಕ್ಷ ಕುಂಬಾರು ದೊಡ್ಡಪ್ಪ, ದೇವಸ್ಥಾನದ ಸಹಾಯಕ ಪ್ರಭುಸ್ವಾಮಿ, ಎನ್. ಪ್ರಕಾಶ್. ಬಿ.ಚಂದ್ರಪ್ಪ, ಎಚ್.ಎಂ.ಶೇಖರಯ್ಯ ಸ್ವಾಮಿ ಸೇರಿದಂತೆ ಪಟ್ಟಣ ಮುಖಂಡರು ಇದ್ದರು.