ಕುರುಗೋಡಿನಲ್ಲಿ ಸರಳ ಪೌರಕಾರ್ಮಿಕರ ದಿನಾಚರಣೆ

ಕುರುಗೋಡು.ಮೇ.02: ತಮ್ಮ ಸ್ವಂತ ಸುಖ, ಸಂತೋಷಗಳನ್ನು ತ್ಯಾಗಮಾಡಿ ತಮ್ಮನ್ನು ನಂಬಿರುವ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿ, ದುಡಿಮೆಯೇ ದೇವರು ಎಂದು ನಂಬಿಕೊಂಡು ಬೆವರು ಸುರಿಸುವ ಕಾರ್ಮಿಕರ ವರ್ಗಕ್ಕೆ ನನ್ನದೊಂದು ಸಲಾಮ್ ಎಂದು ಕುರುಗೋಡು ಪ್ರಗತಿಪರ ಚಿಂತಕ ಚಾನಾಳುಅಂಬರೇಷ್ ಅಭಿಮತವ್ಯಕ್ತಪಡಿಸಿದರು.
ಅವರು ಶನಿವಾರ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪುರಸಭೆಯ ಕಾರ್ಮಿಕರು ಕೆಲಸಮಾಡುವ [ಸ್ವಚ್ಚತೆಮಾಡುವ] ಸ್ಥಳಕ್ಕೆ ಹೋಗಿ ಅವರಿಗೆ ಸಹಿ ತಿನಿಸಿ ಕಾರ್ಮಿಕರ ದಿನಾಚರಣೆ ಶುಭಾಷಯತಿಳಿಸಿ ಮಾತನಾಡುತ್ತಾ, ರಸ್ತೆಸ್ವಚ್ಚತೆ, ಚರಂಡಿಸ್ವಚ್ಚತೆ, ಸೇರಿದಂತೆ ಇತರೆ ಕಾಯಕದಲ್ಲಿ ತಮ್ಮನ್ನು ತಾವುತೊಡಗಿಸಿಕೊಂಡು ಇನ್ನೊಬ್ಬರ ಸುಖಕ್ಕಾಗಿ, ಇನ್ನೊಬ್ಬರ ಸ್ವಚ್ಚತೆಗಾಗಿ ಬೆವರು ಸುರಿಸುತ್ತಾರೆ ಇವರು ನಿಜವಾದ ನಮ್ಮ ದೇಶದ ಆಸ್ತಿ ಎಂದರೆ ತಪ್ಪಾಗಲಾರದು. ಇಂಥಹ ಕೆಲಸವನ್ನು ಮಾಡುವ ಕಾರ್ಮಿಕರನ್ನು ಎಲ್ಲರೂ ಗೌರವಿಸೋಣ, ಜೊತೆಗೆ ಪ್ರೀತಿಯಿಂದ ಕಾಣೋಣ, ಅಂದಾಗ ಮಾತ್ರ ಅವರು ನಮ್ಮಹಾಗೆ ನೆಮ್ಮದಿಯಿಂದ ಬದುಕಲು ಸಾದ್ಯ ಎಂದರು. ನಂತರ ವಿವಿದೆಡೆ ರಸ್ತೆ, ಚರಂಡಿಸ್ವಚ್ಚತೆ ಮಾಡುವ ಸ್ಥಳಕ್ಕೆ ಚಾನಾಳುಕಿರಣ್, ಚಾನಾಳುಮನೋಜ್ ರವರು ಕಾರ್ಮಿಕರಿಗೆ ಸಿಹಿಹಂಚಿ ಶುಭಾಷಯಕೋರಿದರು. ಕಾರ್ಮಿಕರಾದ ಶಿವು, ಜಡೆಪ್ಪ, ಮಂಜು, ಗಂಗಮ್ಮ, ಲಕ್ಷಿ, ಹೇಮಾವತಿ ಇತರೆ ಕಾರ್ಮಿಕರು ಇದ್ದರು.