ಕುರುಗೋಡಿನಲ್ಲಿ ಸಂಬ್ರಮದಿಂದ ಜರುಗಿದ  ಶರಣ ಹೂಗಾರಮಾದಯ್ಯ ಜಯಂತಿ

ಕುರುಗೋಡಿನಲ್ಲಿ ಸಂಬ್ರಮದಿಂದ ಜರುಗಿದ ಶರಣ ಹೂಗಾರಮಾದಯ್ಯ ಜಯಂತಿ
ಸಂಜೆವಾಣಿ ವಾರ್ತೆ
ಕುರುಗೋಡು.ಸೆ.11  ಪಟ್ಟಣದ  ಆರಾದ್ಯದೈವ ಶ್ರೀ ದೊಡ್ಡಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕುರುಗೋಡು ಹೂಗಾರ ಸಮಾಜದ ವತಿಯಿಂದ   ಶ್ರೀಬಸವಾದಿ ಶರಣ ಹೂಗಾರಮಾದಯ್ಯನವರ ಜಯಂತೋತ್ಸವವನ್ನು ಸಂಬ್ರಮದಿಂದ ಜಗುಗಿಸಿದರು.
ಪ್ರಾರಂಭದಲ್ಲಿ ಕುರುಗೋಡು ಹೂಗಾರು ಸಮಾಜದ ಬಂದುಗಳು ಸಮೂಹಿಕವಾಗಿ ಶ್ರೀಬಸವಾದಿ  ಶರಣ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ  ಹೂಮಾಲೆ ಶ್ರದ್ದಾ-ಭಕ್ತಿಯಿಂದ ಪೂಜಿಸಿ ನಮಸಿದರು. ನಂತರ  ಹೂಗಾರ ಸಮಾಜದ ಮುಖಂಡರು ಮಾತನಾಡಿ, ಶರಣಹೂಗಾರ ಮಾದಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನವರ  ಜತೆಗೂಡಿ ಬಸವಾದಿಶರಣರಿಗೆ ಹೂವು ಪೂರೈಸುವ ಕಾಯಕಕೈಗೊಂಡಿದ್ದರು ಎಂದು ನುಡಿದರು. ಅಂಥಹ ಶರಣ ಹೂಗಾರ ಮಾದಯ್ಯನವರ ಆದರ್ಶ ತತ್ವಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಂಡು ಜೀವನದಲ್ಲಿ ಅಭಿವೃದ್ದಿಪಥದತ್ತ ಮುನ್ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕುರುಗೋಡು ಹೂಗಾರ ಸಮಾಜದ ಮುಖಂಡ ಜೀರುಎರ್ರಿಸ್ವಾಮಿ, ಡಾ. ಸೋಮಶೇಖರಹೂಗಾರ, ಪಿ. ಮಲ್ಲಿಕಾರ್ಜನ,  ಶಿಕ್ಷಕ ತುಕಾರಾಂಗೊರವ,  ಜೀರ್‍ಮಹಬಲೇಶ್ವರ, ಜೀರುರುದ್ರಪ್ಪ, ಜೀರುಯೋಗೀಶ್, ಜೀರುಗಂಗಾಧರ,  ಶ್ರೀಕರಣ, ಜೀರುಬಸವರಾಜ, ಜೀರುವಿನಯ್, ಜೀರುಗಿರೀಶಕುಮಾರ್, ಜೀರುಪೊಂಪಾಪತಿ, ಬಾದನಹಟ್ಟಿ ಕರಿಬಸವ, ಈರಣ್ಣ, ಜೀರುನಿರ್ಮಲಮ್ಮ, ಜೀರುದೊಡ್ಡಬಸಪ್ಪ, ಸೇರಿದಂತೆ ಇತರೆ ಹೂಗಾರ ಸಮಾಜದ ಬಂದುಗಳು ಮತ್ತು ಮಹಿಳೆಯರು ಭಾಗವಹಿಸಿ ಶರಣಹೂಗಾರ ಮಾದಯ್ಯನವರ ಜಯಂತಿಯನ್ನು ಸಂಬ್ರಮದಿಂದ ಆಚರಿಸಿದರು.
,