ಕುರುಗೋಡಿನಲ್ಲಿ ಶ್ರೀವಿಶ್ವಕರ್ಮ ಜಯಂತೋತ್ಸವ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.18  ಭಗವಾನ್ ಶ್ರೀ ವಿಶ್ವಕರ್ಮ ಜಯಂತೋತ್ಸವವನ್ನು ಕುರುಗೋಡು ವಿಶ್ವಕರ್ಮ ಸೇವಾಟ್ರಸ್ಟ್ ವತಿಯಿಂದ ಸಂಬ್ರಮದಿಂದ ಆಚರಿಸಿದರು. ಪ್ರಾರಂಭದಲ್ಲಿ ವಿಶ್ವಕರ್ಮ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹೋಮ, ಹಯನ, ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪವಾಗಿ ಜರುಗಿದವು.
ನಂತರ ವಿಶ್ವಕರ್ಮ ಸಮಾಜದ ಬಂದುಗಳು ಭಗವಾನ್ ಶ್ರೀ ವಿಶ್ವಕರ್ಮರ ಬಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖಬೀದಿಗಳಲ್ಲಿ ಭವ್ಯವಾಗಿ ಮೆರವಣಿಗೆ ಜರುಗಿಸಿದರು. ವಿಶ್ವಕರ್ಮ ಸಮಾಜ ಕುಲಗುರು ಶಿವಶಂಕರಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕುರುಗೋಡು ವಿಶ್ವಕರ್ಮ ಸೇವಾಟ್ರಸ್ಟ್ ಅದ್ಯಕ್ಷ ಕಲ್ಲುಕಂಬ ಬಡಿಗೇರುಪ್ರಕಾಶ್, ಹಿರಿಯರಾದ ಡಾ. ತಿಪ್ಪೇಸ್ವಾಮಿ, ನಾಗಮೂರ್ತಿಆಚಾರಿ, ಮಾನಪ್ಪಆಚಾರಿ, ವೀರೇಶಆಚಾರಿ, ಆಟೋವೀರೇಶ, ಗುರುಮೂರ್ತಿಆಚಾರಿ,  ಬಿ. ಚಂಧ್ರಶೇಖರ, ತ್ರಿಲೋಕ್‍ಆಚಾರಿ, ಶಷಿದರ್,  ಕಾಳಪ್ಪಆಚಾರಿ, ಪ್ರವೀಣ್‍ಕುಮಾರ್, ಟೈಲರ್‍ವೆಂಕಟೇಶ, ಹರೀಷ್, ರಮೇಶ, ರವಿಆಚಾರಿ, ಕೃಷ್ಭ, ಪೂಜಾರಿವಿಶ್ವ, ವೀರೇಶಅಚಾರಿ, ಪೇಂಟ್‍ವಿಶ್ವ, ಬಸವರಾಜ್, ಶ್ರೀಶೈಲಬಡಿಗೇರ್, ಅರುಣ್‍ಬಡಿಗೇರ್, ಸೇರಿದಂತೆ ಕುರುಗೋಡು ತಾಲೂಕಿನ ವಿವಿದ ಗ್ರಾಮಗಳ ವಿಶ್ವಕರ್ಮ ಸಮಾಜದ ಬಂದುಗಳು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದ್ದರು. ಕೊನೆಯಲ್ಲಿ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಬಂದುಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.
ಸನ್ಮಾನ ; ಕುರುಗೋಡು ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕಂಪ್ಲಿಕ್ಷೇತ್ರದ ಮಾಜಿ ಶಾಸಕ ಟಿಹೆಚ್.ಸುರೇಶಬಾಬು ಅವರನ್ನು ಕುರುಗೋಡು ವಿಶ್ವಕರ್ಮ ಸೇವಾಟ್ರಸ್ಟ್ ವತಿಯಿಂದ ಗೌರವಿಸಿ, ಸನ್ಮಾನಿಸಿದರು.