ಕುರುಗೋಡಿನಲ್ಲಿ ದೇವನೂರರ
ಆರ್ ಎಸ್.ಎಸ್. ಆಳ ಅಗಲ ಕೃತಿ ಬಿಡುಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಇಂದು ಭಾರತ ಕಮ್ಯೂನಿಸ್ಟ್ ಪಕ್ಷದಿಂದ ದೇವನೂರು ಮಹಾದೇವ ಅವರ ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಬೃಹತ್ ಎಂಬ ಭ್ರಮೆ ಹುಟ್ಟಿಸಿರುವ.ಆದರೆ ನಿಜದಲ್ಲಿ ಅಲ್ಪಸಂಖ್ಯಾತವಾದ ಆ ಭೂತಕಾಲದ ಪೈಶಾಚಿಕ ಚಾತುರ್ವರ್ಣವನ್ನು ಪ್ರತಿಪಾದಿಸುವ ಈ ಅಲ್ಪ ಹಿಂದೂ ಮತ ಪ್ರಭೇದವನ್ನೇ ಬಹುಸಂಖ್ಯಾತ ಎಂದು ಬಿಂಬಿಸುತ್ತಿರುವ ಆರ್ ಎಸ್ ಎಸ್ ಗುಂಪೇ ದೇಶವನ್ನು ಹಿಂದಕ್ಕೆ ಎಳೆಯುತ್ತಿರುವ ಹಿನ್ನಡೆ ಗುಂಪು.
ಇತ್ತೀಚೆಗೆ ಮಕ್ಕಳ ಪಠ್ಯ ಪುಸ್ತಕದ ಪಾದಗಳನ್ನೂ ದೆವ್ವಗಳ ಪಾದಗಳಂತೆ ಹಿಂದಕ್ಕೆ ತಿರುಚಿ.ಹಿಂದುಹಿಂದಕ್ಕೆ ಚಲಿಸುವಂತೆ ಮಾಡಿದೆ.ಪೈಶಾಚಿಕ ಹಿಂಚಲನೆ ನಡಿಗೆ ಇವರದು.ಈ ಹಿನ್ನಡೆ ಗುಂಪುಗಳ ನಾನಾ ವೇಶಗಳನ್ನೆಲ್ಲಾ ಒಂದೊಂದಾಗಿ ಕಳಚಿ ಅದರ ನಿಜಸ್ವರೂಪವನ್ನು ಸಮಾಜದ ಮುಂದಿಡಬೇಕಾಗಿರುವುದು ತಕ್ಷಣದ ತುರ್ತು.ಇದಕ್ಕಾಗಿ ಜಾಗೃತರಾಗಬೇಕಾಗಿದೆ.
ದೇಶ ಭಕ್ತ ಸಂಘಟನೆ ಎಂದು ಹೇಳಿಕೊಂಡು ದೇಶದಲ್ಲಿರುವಂಥ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವಂತ ಜನರಲ್ಲಿ ಒಡಕು ಮೂಡಿಸುವಂಥ ಮತ್ತು ಸಂವಿದಾನವನ್ನ ಬದಲಾಯಿಸುತ್ತೇವೆ ಎಂದು ಬೊಬ್ಬೆ ಹಾಕುತ್ತದೆ ಇಂತಹ ಸಂಘಟನೆಯಿಂದ ದೇಶದ ಸರ್ವನಾಶಕ್ಕೆ ಎಡೆ ಮಾಡಿ ಕೊಡುವಂಥ ಗುಣಗಳುಳ್ಳ ಆರ್ ಎಸ್ ಎಸ್ ಸಂಘಟನೆಯನ್ನು ದೇಶದಿಂದ ಓಡಿಸಲಿಕ್ಕೆ ದೇವನೂರು ಮಹಾದೇವ ಅವರ ಕೃತಿ ಎಲ್ಲಾ ನಮ್ಮ ದೇಶದ ಜನರಿಗೆ ಪ್ರೇರಣೆಯಾಗಬೇಕು ಎಂದು ಕೃತಿ ಬಿಡುಗಡೆ ಮಾಡಿದವರು ಹೇಳಿದರು.
ವಿ ಎಸ್ ಶಿವಶಂಕರ್ .ಗಾಳಿ ಬಸವರಾಜ. ಎಸ್ ಪಿ ಮಹಮದ್ ಖಾನ್. ಎನ್ನ ಸೋಮಪ್ಪ .ಎಚ್ ಯಂಕಮ್ಮ.ಎ ಮಂಜುನಾಥ್.ಅಮೀನ್ ಸಾಬ್. ಆರ್ ಎನ್ ಅಂಜಿನಯ್ಯ .ಎನ್ ಹುಲೆಪ್ಪ . ಎಚ್ ಕೆಂಚಪ್ಪ.ಹನುಮಕ್ಕ . ಕೆಂಚಮ್ಮ.ಎಚ್ ಸಿದ್ದಪ್ಪ.ಎನ್ ನಾಗರಾಜ.ಎನ್ ವನ್ನಪ್ಪ.ರಜಾಬ್ ಸಾಬ್ ಇತರರು ಇದರಲ್ಲಿ ಭಾಗವಹಿಸಿದ್ದರು